ಬುಧವಾರ, ಮಾರ್ಚ್ 29, 2023
32 °C

ಶುಭಲತಾ ಆರೋಗ್ಯ ವಿಚಾರಿಸಿದ ಸಂಸದ ಅನಂತಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅನಾರೋಗ್ಯಕ್ಕೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿರುವ ವಿಧಾನ ಪರಿಷತ್‌ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ಅವರನ್ನು ಸೋಮವಾರ ಭೇಟಿಯಾದ ಸಂಸದ ಅನಂತಕುಮಾರ ಹೆಗಡೆ ಆರೋಗ್ಯ ಸ್ಥಿತಿ ವಿಚಾರಿಸಿದರು.

ಇಲ್ಲಿನ ಪಾದ್ರಿಬಾಗದಲ್ಲಿರುವ ನಿವಾಸಕ್ಕೆ ಶಾಸಕರಾದ ರೂಪಾಲಿ ನಾಯ್ಕ, ಸುನೀಲ ನಾಯ್ಕ ಅವರ ಜತೆಗೂಡಿ ತೆರಳಿದ ಅವರು ಶುಭಲತಾ ಅವರೊಂದಿಗೆ ಕೆಲಹೊತ್ತು ಮಾತನಾಡಿದರು. ಶುಭಲತಾ ಪುತ್ರ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ ತಮ್ಮ ತಾಯಿಯ ಆರೋಗ್ಯ ಸ್ಥಿತಿಗತಿ, ಚಿಕಿತ್ಸೆ ಕುರಿತು ವಿವರಿಸಿದರು.

ಸಂಸದರ ಭೇಟಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಆನಂದ್ ಅಸ್ನೋಟಿಕರ್, ‘ಅನಂತಕುಮಾರ ವೈಯಕ್ತಿಕವಾಗಿ ನಮ್ಮ ಕುಟುಂಬದ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ನಮ್ಮ ತಾಯಿಯ ಬಗ್ಗೆ ಅವರು ಅಪಾರ ಗೌರವ ಹೊಂದಿರುವ ಕಾರಣ ಅವರ ಯೋಗಕ್ಷೇಮ ವಿಚಾರಿಸಲು ಬಂದಿದ್ದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.