ಶನಿವಾರ, ಆಗಸ್ಟ್ 13, 2022
26 °C

ಕ್ರೀಡಾಕೂಟ | ಆವೆ ಮರಿಯಾ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ ಹಾಗೂ ಜ್ಯೂನಿಯರ್ ರಾಕೆಟ್ ಬಾಲ್ ಕ್ರೀಡಾಕೂಟಕ್ಕೆ ಇಲ್ಲಿನ ಆವೆ ಮರಿಯಾ ಪ್ರೌಢಶಾಲೆಯ 9 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

15 ಮತ್ತು 19 ವರ್ಷ ವಯೋಮಿತಿಯವರ ಈ ಕ್ರೀಡಾಕೂಟವು ನವದೆಹಲಿಯಲ್ಲಿ ನಡೆಯುತ್ತಿದೆ. 9 ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ನಿತೀಶ ನಾಯ್ಕ, ಪ್ರೀತಮ್ ಅಣ್ಣಪ್ಪ ರಾಯ್ಕರ್, ರಂಜಿತಾ ಪಟಗಾರ, ವೇಧಾ ಶಿರಾಲಿ, ಎಸ್.ಮೇಘನಾ, ಜಾಫರ ಹಸನ ಶೇಖ್, ರೋಹಿತ ಜನಾರ್ಧನ ಪೂಜಾರಿ, ಕಿರಣ ಜೋಗಳೇಕರ್, ಸಂಜನಾ ರವಿ ರಾಮನಟ್ಟಿ ಆಯ್ಕೆಯಾದ ವಿದ್ಯಾರ್ಥಿಗಳು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ ಡಿಸೋಜಾ, ಪ್ರದೀಪ ನಾಯ್ಕ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು