ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಮನೆ–ಮನೆ ಸಂಪರ್ಕ

ಅಭಿಯಾನಕ್ಕೆ ಚಾಲನೆ
Last Updated 8 ಜೂನ್ 2020, 15:10 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಬಿಜೆಪಿ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸೋಮವಾರ ಮನೆ-ಮನೆ ಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅವರು, ‘ನರೇಂದ್ರ ಮೋದಿ ಸರ್ಕಾರದ ಎರಡನೆಯ ಅವಧಿಯ ಮೊದಲ ವರ್ಷದ ಸಾಧನೆಗಳನ್ನು ತಿಳಿಸುವ ಕರಪತ್ರ ಹಾಗೂ ಮೋದಿಯವರು ಜನತೆಗೆ ಬರೆದಿರುವ ಪತ್ರ ಈ ಎರಡೂ ಪ್ರತಿಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸಲಿದ್ದಾರೆ’ ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ಮನೆ-ಮನೆಗಳಿಗೆ ತೆರಳುವಾಗ ಪರಸ್ಪರ ಅಂತರ ಪಾಲನೆಯಾಗಬೇಕು. ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿ ತೆರಳಿ ಎಲ್ಲ ಮನೆಗಳನ್ನು ಸಂಪರ್ಕ ಮಾಡಬೇಕು ಎಂದು ಸೂಚನೆ ನೀಡಿದರು.

ಆತ್ಮನಿರ್ಭರ ಭಾರತ ಅಭಿಯಾನದ ಕುರಿತಾಗಿ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಅವರು, ‘ಪರೋಕ್ಷ ಸಮಾವೇಶಗಳ ಮೂಲಕ ಜನರನ್ನು ತಲುಪಬೇಕು. ರಾಜ್ಯ ಹಾಗೂ ವಿಭಾಗ ಮಟ್ಟದಲ್ಲಿ ನಡೆಯುವ ಫಲಾನುಭವಿಗಳ ಪರೋಕ್ಷ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಪಕ್ಷದ ಪ್ರಮುಖರಾದ ರೇಖಾ ಅಂಡಗಿ, ಗುರುಪ್ರಸಾದ ಹೆಗಡೆ, ಶ್ರೀಕಾಂತ ನಾಯ್ಕ, ರಾಜೇಶ ಶೆಟ್ಟಿ, ಗಣಪತಿ ನಾಯ್ಕ ಇದ್ದರು. ನಂತರ ನಾಡಿಗಗಲ್ಲಿಯ ಮನೆ, ಅಂಗಡಿಗಳಿಗೆ ತೆರಳಿ ಕರಪತ್ರ ವಿತರಿಸಿ, ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT