ಗುರುವಾರ , ಸೆಪ್ಟೆಂಬರ್ 19, 2019
26 °C

ವೇತನ ಸಿಗದೇ ಕೆಲಸಕ್ಕೆ ಹಾಜರಾಗಲ್ಲ: ಬಿಎಸ್‌ಎನ್‌ಎಲ್ ಗುತ್ತಿಗೆ ನೌಕರರು

Published:
Updated:
Prajavani

ಜೊಯಿಡಾ: ಆರು ತಿಂಗಳಿನಿಂದ ಬಾಕಿಯಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಎಸ್‌ಎನ್‌ಎಲ್‌ ಗುತ್ತಿಗೆ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಭಾಗವಹಿಸಿದ್ದರು. 

‘ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ದೂರವಾಣಿ ಕೇಂದ್ರಗಳಲ್ಲಿ 21 ಗುತ್ತಿಗೆ ಕಾರ್ಮಿಕರು ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರು ತಿಂಗಳಿನಿಂದ ವೇತನ ಸಿಗದೇ ಜೀವನ ಮುನ್ನಡೆಸುವುದು ಕಷ್ಟವಾಗಿದೆ. ನಾವು ಕುಟುಂಬಸ್ಥರಾಗಿದ್ದು ನಮ್ಮನ್ನೇ ನಂಬಿ ಕುಟುಂಬ ನಡೆಯುತ್ತದೆ. ಪರಿಚಯಸ್ಥರಿಂದ ಸಾಲ ಪಡೆದು ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ. ನಾವು ಈಗಾಗಲೇ ಮಾನಸಿಕವಾಗಿ ತುಂಬಾ ಕುಗ್ಗಿದ್ದೇವೆ. ಮೇಲಧಿಕಾರಿಗಳಿಗೆ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಅಳಲು ತೋಡಿಕೊಂಡರು.

‘ತಮ್ಮ ಆರು ತಿಂಗಳ ವೇತನವನ್ನು ಒಂದೇ ಸಾರಿ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಇಲಾಖೆಗೆ ಅಥವಾ ದೂರವಾಣಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಉಪಕರಣಗಳಿಗೆ ಆಗುವ ಅನಾಹುತಕ್ಕೆ ತಾವು ಜವಾಬ್ದಾರರು ಅಲ್ಲ’ ಎಂಬ ಪತ್ರವನ್ನು ಮೇಲಧಿಕಾರಿಗಳಿಗೆ ನೀಡಿದರು.

ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬಾಕಿ ವೇತನವನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಪ್ರತಿಭಟನಾಕಾರರು ವಿಶ್ವಾಸ ವ್ಯಕ್ತಪಡಿಸಿದರು. 

Post Comments (+)