ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅವಧಿ ಮೀರಿದ ತಾಳೆ ಎಣ್ಣೆ ವಿತರಣೆ: ಆರೋಪ

ಸಂತ್ರಸ್ತರಿಂದ ವಾಪಸ್ ಪಡೆದು ಬೇರೆ ನೀಡಲಾಗುತ್ತದೆ: ಶಾಸಕಿ ರೂಪಾಲಿ
Last Updated 15 ಫೆಬ್ರುವರಿ 2020, 13:27 IST
ಅಕ್ಷರ ಗಾತ್ರ

ಕಾರವಾರ:ತಾಲ್ಲೂಕಿನ ಮಲ್ಲಾಪುರ ಸುತ್ತಮುತ್ತಲಿನ ನೆರೆ ಸಂತ್ರಸ್ತರಿಗೆ ಶಾಸಕಿ ರೂಪಾಲಿ ನಾಯ್ಕ ವಿತರಿಸಿರುವತಾಳೆ ಎಣ್ಣೆ (ಪಾಮ್ ಆಯಿಲ್) ಈಗ ಚರ್ಚೆಗೆ ಕಾರಣವಾಗಿದೆ. ಅವರುಅವಧಿ ಮೀರಿದಎಣ್ಣೆಯನ್ನು ವಿತರಿಸಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.

ಇದಕ್ಕೆ ಪ್ರತಿಯಾಗಿ ರೂಪಾಲಿ ನಾಯ್ಕ, ‘ಇಷ್ಟುಚಿಕ್ಕ ವಿಚಾರವನ್ನು ಬಳಸಿಕೊಂಡು ಕಾಂಗ್ರೆಸ್‌ನವರು ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರುನೆರೆ ಸಂತ್ರಸ್ತರ ನೋವನ್ನು ಒಂದು ದಿನವೂ ಕೇಳಲು ಬಂದಿರಲಿಲ್ಲ. ಈ ರೀತಿಯ ರಾಜಕಾರಣ ಒಳ್ಳೆಯದಲ್ಲ’ ಎಂದುತಿರುಗೇಟು ನೀಡಿದ್ದಾರೆ.

ರೂಪಾಲಿ ಅವರು ತಮ್ಮ ಸ್ವಂತ ಖರ್ಚಿನಿಂದ ಅಡುಗೆ ಎಣ್ಣೆ, ಅಕ್ಕಿ, ಬೇಳೆ ಮುಂತಾದ ಸಾಮಗ್ರಿಯ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಅದರಲ್ಲಿದ್ದ ಅಡುಗೆ ಎಣ್ಣೆಯ ಪ್ಯಾಕೆಟ್‌ನಲ್ಲಿಆರು ತಿಂಗಳ ಅವಧಿಗೆ ಸೂಕ್ತ ಎಂದು ಬರೆಯಲಾಗಿತ್ತು. ಇದನ್ನು ಗಮನಿಸದೇ ಸಂತ್ರಸ್ತರಿಗೆ ಅವರು ವಿತರಿಸಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ‘ಶಾಸಕಿ ರೂಪಾಲಿ ನಾಯ್ಕ ಅವರುಬಡ ಸಂತ್ರಸ್ತರಿಗೆ ಅವಧಿ ಮುಗಿದ ವಸ್ತುಗಳನ್ನು ನೀಡಿದ್ದು ಖಂಡನೀಯವಾಗಿದೆ. ಈ ರೀತಿ ಅವಧಿ ಮುಗಿದ ವಸ್ತುಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಗಳಲ್ಲಿ ‌ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಬಡ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ’ ಎಂದು ಟೀಕಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರೂಪಾಲಿ ನಾಯ್ಕ, ‘ಮಲ್ಲಾಪುರದಲ್ಲಿ ಪರಿಹಾರ ಸಾಮಗ್ರಿಯನ್ನುಕಾರ್ಯಕರ್ತರೇ ವಿತರಿಸಬೇಕಿತ್ತು. ಆದರೆ, ಊರಿನವರು ಶಾಸಕರೇ ಬಂದು ಕೊಡಬೇಕು ಆಶಯ ವ್ಯಕ್ತಪಡಿಸಿದ್ದರು. ಹಾಗಾಗಿ ಸಾಮಗ್ರಿಯನ್ನು ಸಂಗ್ರಹಿಸಿಟ್ಟಿದ್ದರು. ಆ ಸಮಯದಲ್ಲಿ ನನಗೆ ಆರೋಗ್ಯದ ಸಮಸ್ಯೆಯಾಗಿ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ವಿತರಣೆ ವಿಳಂಬವಾಯಿತು. ಸಂತ್ರಸ್ತರಿಗೆ ಶುಕ್ರವಾರ ನೀಡುತ್ತಿದ್ದವೇಳೆ ಅಡುಗೆ ಎಣ್ಣೆಯ ಅವಧಿ ಮೀರಿದ್ದುಗಮನಕ್ಕೆ ಬಂದ ಕೂಡಲೇ ವಿತರಣೆ ನಿಲ್ಲಿಸಿದ್ದೇವೆ. 450 ಸಂತ್ರಸ್ತರ ಪೈಕಿ 90 ಜನರಿಗೆ ಈಗಾಗಲೇ ಕೊಡಲಾಗಿದ್ದು, ವಾಪಸ್ ನೀಡುವಂತೆ ಎಲ್ಲರಿಗೂ ತಿಳಿಸಲಾಗಿದೆ. ಅವರಿಗೆ ಬೇರೆಯದನ್ನು ನೀಡಲಾಗುತ್ತದೆ’ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT