ಸೋಮವಾರ, ಜುಲೈ 26, 2021
26 °C
ಗೆದ್ದು ಬಂದವರು

‘ಕೋವಿಡ್ 19 ಕಾಯಿಲೆಯೇ ಅಲ್ಲ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ‘ಕೋವಿಡ್ 19 ಎಂಬುದು ಕಾಯಿಲೆಯೇ ಅಲ್ಲ ಎಂದು ನನಗನಿಸುತ್ತದೆ. ಬೇರೆ ಬೇರೆ ಗಂಭೀರ ಕಾಯಿಲೆ ಇದ್ದವರಿಗೆ, ವಯಸ್ಸಾದವರಿಗೆ ಹೆಚ್ಚು ಎಚ್ಚರಿಕೆ ಬೇಕಾಗಬಹುದು. ಆದರೆ, ಸದೃಢ ಮನುಷ್ಯನ ದೇಹದ ಮೇಲೆ ಈ ಸೋಂಕಿನಿಂದ ಯಾವ ವ್ಯತಿರಿಕ್ತ ಪರಿಣಾಮವೂ ಆಗದು’ ಎನ್ನುತ್ತಲೇ ಮಾತಿಗಾರಂಭಿಸಿದರು ಶಿರಸಿಯ ನಿರಂಜನ ಅವರು.

‘ಗಂಟಲು ದ್ರವದ ಪರೀಕ್ಷೆಯಲ್ಲಿ ನನ್ನ ದೇಹದಲ್ಲಿ ಸೋಂಕಿರುವುದು ದೃಢಪಟ್ಟಾಗ, ಒಮ್ಮೆ ತುಂಬಾ ಭಯವಾಗಿತ್ತು. ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು, ತಾಯಿ ಇದ್ದಾರೆ ಎಂದು ಆತಂಕವಾಗಿತ್ತು. ನಮ್ಮ ಸಂಸ್ಥೆಯ ಮುಖ್ಯಸ್ಥರು ಧೈರ್ಯತುಂಬಿ, ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿದರು. ನಮ್ಮ ಕುಟುಂಬ ವೈದ್ಯರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿ ವಿಚಾರಿಸಿದೆ. ಅವರು ಸಹ ವಿಶ್ವಾಸ ತುಂಬಿದರು. ಅಲ್ಲಿಗೆ ಹೋಗಿ ಆರು ದಿನಗಳ ಒಳಗಾಗಿ ನನ್ನ ವರದಿ ನೆಗೆಟಿವ್ ಬಂದಿತ್ತು’ ಎಂದು ಅವರು ವಿವರಿಸಿದರು.

‘ನನಗೆ ರೋಗದ ಯಾವುದೇ ಲಕ್ಷಣ ಇರಲಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತೀವ ಕಾಳಜಿಯಿಂದ ನಮ್ಮನ್ನು ನೋಡಿಕೊಂಡಿದ್ದಾರೆ. ಆರೋಗ್ಯ ಸುರಕ್ಷತೆಗಾಗಿ ವಿಟಮಿನ್ ‘ಸಿ’ ಜೊತೆ ಇನ್ನೆರಡು ಮಾತ್ರೆಗಳನ್ನು ಸೇವಿಸಿದ್ದು ಬಿಟ್ಟರೆ, ಇನ್ನಾವುದೇ ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಬರಲಿಲ್ಲ. ಆದರೆ, ಜನರಿಗೆ ಈ ಕಾಯಿಲೆ ಬಗ್ಗೆ ತಪ್ಪು ತಿಳಿವಳಿಕೆಯಾಗಿದೆ. ಯಾವುದೋ ಗಂಭೀರ ಕಾಯಿಲೆ ಬಂದವರಂತೆ, ಕೋವಿಡ್ ಬಂದವರನ್ನು ಅಸ್ಪ್ರಷ್ಯರಂತೆ ನೋಡುತ್ತಾರೆ. ಜನರ ದೃಷ್ಟಿಕೋನ ಬದಲಾಗಬೇಕು. ನೂರಾರು ಜನರು ಕರೆ ಮಾಡಿ ವಿಚಾರಿಸಿದ್ದಾರೆ. ಅವರಿಗೆಲ್ಲ ತಿಳಿವಳಿಕೆ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು