ಗುರುವಾರ , ಅಕ್ಟೋಬರ್ 29, 2020
19 °C

ಬಿರುಕು ಬಿಟ್ಟ ಗುಡ್ಡ: ವಾಹನ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರೂರು ಸಮೀಪ ಗುಡ್ಡ ಬಿರುಕು ಬಿಟ್ಟಿದೆ. ರಸ್ತೆಯ ನಡುವೆ ಸುಮಾರು ಆರು ಇಂಚುಗಳಷ್ಟು ಬಿರುಕು ಕಾಣಿಸಿಕೊಂಡಿದೆ.

ಮಲ್ಲಾಪುರದಿಂದ ಕೈಗಾಕ್ಕೆ ಸಾಗಿ ಹರೂರು- ಬಾರೆ ಮೂಲಕ ಯಲ್ಲಾಪುರ ತಾಲ್ಲೂಕಿನ ಇಡಗುಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ಭಾಗದಲ್ಲಿ ಮನೆಗಳಿಲ್ಲ. ಕಾಡಿನ ಮಧ್ಯೆ ಸಾಗುವ ದಾರಿ ಇದಾಗಿದ್ದು, ಗುಡ್ಡ ಕುಸಿದರೆ ಇಡಗುಂದಿ- ಮಲ್ಲಾಪುರ ನಡುವೆ ಸಂಪರ್ಕ ಕಡಿತವಾಗಲಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು