ಭಾನುವಾರ, ಜೂನ್ 13, 2021
20 °C

ಶಿರಸಿ: ನಕಲಿ ಪಾಸ್‌ಪೋರ್ಟ್ ಜಾಲ ಭೇದಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ನಕಲಿ ಪಾಸ್‌ಪೋರ್ಟ್ ತಯಾರಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಹುಲೇಕಲ್ ಗ್ರಾಮದ ಹಂಚರಟ್ಟಾದ ಮುಸ್ಲಿಂ ಗಲ್ಲಿ ನಿವಾಸಿ ಅಬ್ದುಲ್ ರೆಹಮಾನ (22) ವಿದೇಶಕ್ಕೆ ತೆರಳಲು ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈ ಬಗ್ಗೆ ಈತನ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ನಕಲಿ ಪಾಸ್‌ಪೋರ್ಟ್ ತಯಾರಿಸಿರುವ ಕುರಿತು ತನಿಖೆ ನಡೆಸಿದ ವೇಳೆ ಮೂವರನ್ನೊಳಗೊಂಡ ತಂಡವೊಂದು ಈ ಕಾರ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಆರೋಪಿತರಾದ ಹಂಚರಟ್ಟಾದ ಅಬ್ದುಲ್ ರೆಹಮಾನ, ಹುಬ್ಬಳ್ಳಿಯ ಲಕ್ಷ್ಮೀ ಮತ್ತು ಕಲಬುರ್ಗಿ ಜಿಲ್ಲೆ ಆಳಂದದ ನಿಯಾಜ ಅಹಮದ್ ಎನ್ನುವವರನ್ನು ಬಂಧಿಸಿದ್ದಾಗಿ ಗ್ರಾಮೀಣ ಠಾಣೆ ಎಸ್‌ಐ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು