ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ | ಭತ್ತದ ಬೆಳೆಯ ಮೇಲೆ ಕಾರ್ಮುಗಿಲು

ಜೊಯಿಡಾ: ನಾಲ್ಕು ದಿನಗಳಿಂದ ಬಿಸಿಲು ಕಾಣದೇ ಕೃಷಿಕರು ಕಂಗಾಲು
Last Updated 3 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಜೊಯಿಡಾ: ನಾಲ್ಕು ದಿನಗಳಿಂದ ಇರುವಮೋಡಕವಿದ ವಾತಾವರಣ ರೈತರ ನೆಮ್ಮದಿ ಕಸಿದುಕೊಳ್ಳುತ್ತಿದೆ. ಭತ್ತ ಕೊಯ್ಲಿಗೆ ಬಂದಿದ್ದು, ಯಾವ ಸಮಯದಲ್ಲಾದರೂ ಮಳೆ ಬರುವ ಆತಂಕವಿದೆ.

ಕಷ್ಟಪಟ್ಟು ಬೆಳೆದ ಭತ್ತದ ಬೆಳೆಯನ್ನು ಕಳೆದುಕೊಳ್ಳುವ ಚಿಂತೆಯಲ್ಲಿ, ರೈತರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶನಿವಾರದಿಂದಲೇ ಮೋಡ ಮುಸುಕಿದ ವಾತಾವರಣವಿದೆ. ಭಾನುವಾರ ರಾಮನಗರ ಭಾಗದಲ್ಲಿ ಸುಮಾರು ಎರಡು ಗಂಟೆಮಳೆಯಾಗಿದೆ. ಸೋಮವಾರ ಗುಂದ, ಅಣಶಿ ಹಾಗೂ ನುಜ್ಜಿ ಭಾಗಗಳಲ್ಲಿ ಮಳೆಯಾಗಿದೆ. ಮಂಗಳವಾರ ಜೊಯಿಡಾ, ಕುಂಬಾರವಾಡ ಹಾಗೂ ಡಿಗ್ಗಿ ಸುತ್ತಮುತ್ತಮಳೆಯಾಗಿರುವುದು ರೈತರಲ್ಲಿ ಚಿಂತೆ ಮೂಡಿಸಿದೆ.

ಈ ವರ್ಷದ ಮಹಾಮಳೆಯ ಹಾನಿಗೆ ತತ್ತರಿಸಿ ಹೋಗಿದ್ದರೈತರು ಛಲಬಿಡದೇ ಎರಡರಿಂದ ಮೂರು ಬಾರಿ ನಾಟಿ ಮಾಡಿದ್ದರು. ಅದರ ಜೊತೆಗೆ ಕಾಡು ಪ್ರಾಣಿಗಳ ಹಾವಳಿಯೂ ಮಿತಿಮೀರುತ್ತಿದೆ. ಇವುಗಳ ನಡುವೆಹರಸಾಹಸ ಮಾಡಿ ಬೆಳೆ ಉಳಿಸಿಕೊಂಡಿದ್ದರು.

ತಾಲ್ಲೂಕಿನಲ್ಲಿ 4,500 ಹೆಕ್ಟೇರ್ ಮುಂಗಾರು ವಾಡಿಕೆ ಬಿತ್ತನೆ ಕ್ಷೇತ್ರವಿದೆ. ಹಲವೆಡೆ ಭತ್ತಕ್ಕೆ ರೋಗ ಕಾಣಿಸಿಕೊಂಡಿದೆ. ಅಪಾರ ಪ್ರಮಾಣದಲ್ಲಿ ಭತ್ತ ಜೊಳ್ಳು ಬಿದ್ದಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕೊಯ್ಲು ಆಗಿದೆ. ಆದರೆ, ಫಸಲನ್ನುಒಣಗಿಸಲು ಬಿಸಿಲು ಇಲ್ಲದೇ ಸಮಸ್ಯೆಯಾಗಿದೆ.

ಒಂದು ದಿನ ಮಳೆ ಬಿದ್ದು ಹೋದರೆ ಅಧಿಕ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲ. ಆದರೆ, ದಿನವೂ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ. ಇದು ಬೆಳೆಯನ್ನು ಉಳಿಸಿಕೊಳ್ಳಲು ಸವಾಲು ಒಡ್ಡುತ್ತಿದೆ ಎನುತ್ತಾರೆ ರೈತಗಂಪು.

ಫಸಲು ಕೊಳೆಯುವ ಆತಂಕ:‘ಸಾಲ ಮಾಡಿ ಬೇರೆಯವರ ಜಮೀನಿನಲ್ಲಿ ಭತ್ತವನ್ನು ಬೆಳೆದಿದ್ದೆ. ಸಾಲ ತೀರಿಸುವಷ್ಟಾದರೂ ಫಸಲು ಬರಬಹುದು ಎಂದು ನಿರೀಕ್ಷೆಯಲ್ಲಿದ್ದೆ. ಸದ್ಯದ ವಾತಾವರಣ ನೋಡಿದರೆ ಭಯವಾಗುತ್ತಿದೆ. ಈಗಾಗಲೇ ಅರ್ಧದಷ್ಟು ಭತ್ತವನ್ನು ಕೊಯ್ಲು ಮಾಡಿದ್ದೇವೆ. ಇನ್ನು ಒಂದು ದಿನ ಬಿಸಿಲು ಬರದಿದ್ದರೆ ಫಸಲು ಪೂರ್ತಿ ಕೊಳೆಯಲಿದೆ’ ಎನ್ನುವುದು ಅವರ ಆರಂಕವಾಗಿದೆ.

ಕಟಾವು ಮುಂದೂಡಿ:‘ತಾಲ್ಲೂಕಿನಲ್ಲಿ ಈಗಾಗಲೇ ಶೇ 40ರಷ್ಟು ಭತ್ತದ ಕಟಾವು ಕಾರ್ಯ ಆಗಿದೆ. ಸಣ್ಣ ಪ್ರಮಾಣದಲ್ಲಾಗುವ ಮಳೆ, ಬೆಳೆ ಹಾನಿ ಮಾಡುವುದಿಲ್ಲ. ಮೋಡ ಕವಿದ ವಾತಾವರಣ ಇರುವುದರಿಂದ ರೈತರು ಬೆಳೆ ಕಟಾವು ಕಾರ್ಯವನ್ನು ಇನ್ನೆರಡು ದಿನಮುಂದೂಡುವುದು ಸೂಕ್ತ’ ಎನ್ನುತ್ತಾರೆಕೃಷಿ ಇಲಾಖೆಯಸಹಾಯಕ ನಿರ್ದೇಶಕಪಿ.ಐ.ಮಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT