ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹರಡುವಿಕೆ ನಿಯಂತ್ರಿಸಿದ ಕೇಂದ್ರದ ನಿಲುವು: ವೆಂಕಟೇಶ ನಾಯಕ

Last Updated 9 ಮೇ 2020, 15:40 IST
ಅಕ್ಷರ ಗಾತ್ರ

ಕಾರವಾರ: ‘130 ಕೋಟಿ ಜನಸಂಖ್ಯೆ ಇರುವದೇಶದಲ್ಲಿಕೇಂದ್ರ ಸರ್ಕಾರದ ನಿರ್ಣಾಯಕ ನಿಲುವಿನಿಂದ ಕೊರೊನಾ ವೈರಸ್ ಹರಡುವ ಪ್ರಮಾಣದಲ್ಲಿ ನಿಯಂತ್ರಣವಾಗಿದೆ. ಇದೇರೀತಿ ರಾಜ್ಯದಲ್ಲೂ ಉತ್ತಮ ರೀತಿಯಲ್ಲಿ ನಿಭಾಯಿಸಲಾಗುತ್ತಿದೆ’ ಎಂದು ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಷ್ಟದಲ್ಲಿರುವವರಿಗೆ ಪಕ್ಷದಿಂದ ಸಹಾಯ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಕಾರ್ಯಕರ್ತರು ಪ್ರತಿದಿನ ಐವರಿಗೆಊಟದ ವ್ಯವಸ್ಥೆ ಮಾಡಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈಗಾಗಲೇಸುಮಾರು ಒಂದೂವರೆ ಲಕ್ಷಪಡಿತರ ಸಾಮಗ್ರಿಯ ಪೊಟ್ಟಣಗಳನ್ನು ಹಂಚಲಾಗಿದೆ. ಅವಶ್ಯಕತೆ ಇರುವರಿಗೆ ಔಷಧವನ್ನೂ ತಲುಪಿಸಲಾಗಿದೆ’ ಎಂದು ಹೇಳಿದರು.

‘ಕಾರ್ಯಕರ್ತರೇ ಅವರ ಮನೆಗಳಲ್ಲಿ ಮುಖಗವಸು ಸಿದ್ಧಪಡಿಸುತ್ತಿದ್ದು, ಈಗಾಗಲೇ ಒಂದೂವರೆ ಲಕ್ಷ ಹಂಚಲಾಗಿದೆ. ಪಕ್ಷದ ಸಹಾಯವಾಣಿಯ ಮೂಲಕತಿಳಿದುಬಂದಶೇ 90ಕ್ಕೂ ಅಧಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ಪಿ.ಎಂ.ಕೇರ್ಸ್ನಿಧಿಗೆ ತಲಾ ₹ 100 ದೇಣಿಗೆ ನೀಡುವಂತೆ ಪ್ರತಿ ಕಾರ್ಯಕರ್ತರಿಗೂ ತಿಳಿಸಲಾಗಿದೆ.1,435 ಬೂತ್ ಕಾರ್ಯಕರ್ತರಿಂದಸುಮಾರು ₹ 60 ಲಕ್ಷ ಈಗಾಗಲೇ ನೀಡಲಾಗಿದೆ’ ಎಂದರು.

‘ಗೋಕರ್ಣ, ಕುಮಟಾ ಮುಂತಾದ ಭಾಗಗಳಲ್ಲಿ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ಜನರಿಗೆ ಉಚಿತವಾಗಿ ತಲುಪಿಸುವ ಕೆಲಸವನ್ನೂ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮಹೆಬ್ಬಾರ, ಮಾರುಕಟ್ಟೆದರಕ್ಕಿಂತ ಹೆಚ್ಚಿನ ದರಕ್ಕೆ ಅನಾನಸ್ ಖರೀದಿಸಿ ತಮ್ಮ ಕ್ಷೇತ್ರದ ಜನರಿಗೆ ಹಂಚಿದ್ದಾರೆ’ ಎಂದು ಪಕ್ಷದ ಕಾರ್ಯಗಳನ್ನು ಹೇಳಿಕೊಂಡರು.

‘ತಾಲ್ಲೂಕಿನಲ್ಲೇ ಚಿಕಿತ್ಸೆ ನೀಡಿ’:‘ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಸೌಲಭ್ಯಗಳಿವೆ ಎಂದು ಮೊದಲೇ ಗುರುತಿಸಿದ ಕಾರಣ ಭಟ್ಕಳದ ಸೋಂಕಿತರನ್ನು ಇಲ್ಲಿಗೆ ಕರೆದುಕೊಂಡು ಬರಲಾಗಿದೆ. ಮುಂದಿನ ದಿನಗಳಲ್ಲಿ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆಗೆ ವ್ಯವಸ್ಥೆಮಾಡಲಿ ಎಂದು ಆಗ್ರಹಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಕೂಡ ತಿಳಿಸಲಾಗಿದೆ’ ಎಂದು ವೆಂಕಟೇಶ ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನಾಗರಾಜ ನಾಯಕ ಹಾಗೂ ಎನ್.ಎಸ್.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT