ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಭಟ್ಕಳ: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ‘ನೀರಜ್ ಹೆಸರಿನ ಎಲ್ಲರಿಗೂ ಉಚಿತ ಊಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸದ್ಯ ದೇಶದ ಹೀರೊ. ಅವರಿಗೆ ನಾಗರಿಕರು ಬಗೆಬಗೆಯಾಗಿ ಹಾರೈಸಿದ್ದಾರೆ. ಇತ್ತ ತಾಲ್ಲೂಕಿನ ಶಿರಾಲಿ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‌ನ ಮಾಲೀಕರು ನೀರಜ್ ಹೆಸರಿರುವ ಎಲ್ಲರಿಗೂ ಉಚಿತ ಊಟ ನೀಡುವುದಾಗಿ ಘೋಷಿಸಿದ್ದಾರೆ.

ಓದಿ: 

ಈಚೆಗೆ ಆರಂಭಗೊಂಡ ತ್ರಾಮ ಹೊಟೇಲ್ ಮಾಲೀಕ ಆಶೀಶ್ ನಾಯಕ, ‘ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

‘ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್‌ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು