ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ₹111ಕ್ಕೆ ತಲುಪಿದ ಪೆಟ್ರೋ‌ಲ್ ದರ

Last Updated 4 ಏಪ್ರಿಲ್ 2022, 19:03 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಪೆಟ್ರೋಲ್‌ ಬೆಲೆ ಸೋಮವಾರ ₹111.61ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹ 95.12ಕ್ಕೆ ತಲುಪಿದೆ.

ಕಳೆದ ವರ್ಷ ಜುಲೈನಲ್ಲಿ ಪೆಟ್ರೋಲ್ ದರ ರಾಜ್ಯದಲ್ಲಿ ಮೊದಲ ಬಾರಿಗೆ ಶಿರಸಿಯಲ್ಲಿ ಶತಕ ದಾಟಿತ್ತು.

ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಸರಬರಾಜಾಗುತ್ತಿದೆ. ಸಾಗಣೆ ವೆಚ್ಚ ಆಧರಿಸಿ ತೈಲ ಕಂಪನಿಗಳು ದರ ನಿಗದಿಪಡಿಸುತ್ತಿರುವ ಕಾರಣ ತೈಲೆ ಬೆಲೆ ಇಲ್ಲಿ ಉಳಿದೆಡೆಗಳಿಗಿಂತ ಹೆಚ್ಚಿದೆ.

ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ 42 ಪೈಸೆಯಷ್ಟು ಹೆಚ್ಚಾಗಿದ್ದು ₹ 109.68ಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ಲೀಟರಿಗೆ 39 ಪೈಸೆ ಹೆಚ್ಚಾಗಿದ್ದು ₹ 93.21ಕ್ಕೆ
ತಲುಪಿದೆ. ಮಾರ್ಚ್‌ 22ರಿಂದಏಪ್ರಿಲ್‌ 4ರವರೆಗೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 8.75ರಷ್ಟು ಮತ್ತು ಡೀಸೆಲ್‌ ದರ ₹ 8.2ರಷ್ಟು ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT