ಭಾನುವಾರ, ಸೆಪ್ಟೆಂಬರ್ 27, 2020
28 °C
ಜೊಯಿಡಾ ತಾಲ್ಲೂಕಿನಲ್ಲಿ ಮುಂದುವರಿದ ಮಳೆಯ ಅಬ್ಬರ

ಜೊಯಿಡಾ: ಹಳೆ ಪಶು ಆಸ್ಪತ್ರೆಯ ಮೇಲೆ ಬಿದ್ದ ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನಲ್ಲಿ ಸೋಮವಾರ ಪ್ರಾರಂಭವಾದ ಗಾಳಿ ಸಹಿತ ಬಿರುಸಿನ ಮಳೆ ಗುರುವಾರವೂ ಮುಂದುವರಿಯಿತು. 48 ಗಂಟೆಗಳಲ್ಲಿ 25 ಸೆ.ಮೀ.ಗೂ ಅಧಿಕ ಮಳೆಯಾಗಿದೆ.

ಗಾಳಿಯ ಅಬ್ಬರಕ್ಕೆ ಹಲವೆಡೆ ಮನೆಗಳ ಮೇಲೆ ಮರಗಳು ಮುರಿದು ಬಿದ್ದಿವೆ. ತಾಲ್ಲೂಕಿನಾದ್ಯಾಂತ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಮೂರು ದಿನಗಳಿಂದ ಜೊಯಿಡಾ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಕುಂಬಾರವಾಡದ ಹಳೇ ಪಶು ಆಸ್ಪತ್ರೆಯ ಕಟ್ಟಡದಲ್ಲಿ ಅಂಬಾಳಿಯ ವಿಠ್ಠಲ ವೇಳಿಪ ಎಂಬುವವರು ಗಣೇಶ ಚತುರ್ಥಿಯ ಸಲುವಾಗಿ 70ಕ್ಕೂ ಅಧಿಕ ಗಣಪತಿಯ ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದರು. ಗುರುವಾರ ಬೆಳಗಿನ ಜಾವ ಬೀಸಿದ ರಭಸದ ಗಾಳಿಯ ಪರಿಣಾಮವಾಗಿ ಈ ಕಟ್ಟಡದ ಮೇಲೆ ಬೃಹತ್ ಮರವೊಂದು ಉರುಳಿ ಬಿತ್ತು. ಇದರಿಂದ ಗಣಪತಿಯ ಮೂರ್ತಿಗಳು, ಅವುಗಳಿಗೆ ಬಳಿಯಲು ತಂದಿಟ್ಟ ಬಣ್ಣ, ಗಣಪತಿ ತಯಾರಿಕೆಯ ಮಾದರಿಗಳು ಸೇರಿದಂತೆ ₹ 70 ಸಾವಿರಕ್ಕೂ ಅಧಿಕ ನಷ್ಟವಾಗಿದೆ.

ನಾಲ್ಕು ದಿನಗಳಲ್ಲಿ ಅಣಶಿಯಿಂದ ರಾಮನಗರದ ಮಾರ್ಗ ಮಧ್ಯದಲ್ಲಿ ಬೆಳಗಾವಿ– ಸದಾಶಿವಗಡ ರಾಜ್ಯ ಹೆದ್ದಾರಿಯ ಮೇಲೆ 30ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಇದರಿಂದಾಗಿ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕದ ಸಮಸ್ಯೆ ಎದುರಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು