ಶನಿವಾರ, ಮೇ 28, 2022
31 °C

ಭಟ್ಕಳ: ಮೀನುಗಾರರಿಗೆ ದರ್ಶನ ನೀಡಿದ ತಿಮಿಂಗಿಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಭಟ್ಕಳ ಭಾಗದಿಂದ ಶನಿವಾರ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬೃಹದಾಕಾರದ ತಿಮಿಂಗಿಲವೊಂದು (ಹಂಪ್‌ಬ್ಯಾಕ್ ವೇಲ್) ನೀರಿನಲ್ಲಿ ಮುಳುಗೇಳುತ್ತ ಬೇಟೆಯಾಡುತ್ತಿದ್ದ ದೃಶ್ಯ ಪುಳಕಿತಗೊಳಿಸಿತ್ತು.

‘ಹಂಪ್‌ಬ್ಯಾಕ್’ ಪ್ರಭೇದದ ತಿಮಿಂಗಿಲಗಳು ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಆದರೆ, ಅವು ನೀರಿನ ಮೇಲ್ಮೈಯಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಈ ಜಾತಿಯ ಮೀನುಗಳು 45ರಿಂದ 50 ವರ್ಷಗಳ ಜೀವಿತಾವಧಿ ಹೊಂದಿದ್ದು, 12ರಿಂದ 16 ಮೀಟರ್‌ಗಳಷ್ಟು ಉದ್ದ ಹಾಗೂ 25ರಿಂದ 30 ಟನ್‌ಗಳಷ್ಟು ತೂಕ ಬೆಳೆಯುತ್ತವೆ.

ಅಪರೂಪಕ್ಕೆ ಕಾಣಿಸಿಕೊಂಡ ತಿಮಿಂಗಿಲದ ಸಂಚಾರದ ಸನ್ನಿವೇಶಗಳನ್ನು ಮೀನುಗಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು