ಶನಿವಾರ, ಸೆಪ್ಟೆಂಬರ್ 25, 2021
24 °C

ಮಂಗಳೂರು– ಮಡಗಾಂವ್ ನಡುವೆ ನೂತನ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮಂಗಳೂರು ಸೆಂಟ್ರಲ್– ಮಡಗಾಂವ್ ಜಂಕ್ಷನ್ ನಡುವೆ ಹೊಸ ರೈಲಿನ ಸಂಚಾರವನ್ನು (ಮುಂಗಡ ಕಾಯ್ದಿರಿಸಿ ಪ್ರಯಾಣ) ಕೊಂಕಣ ರೈಲ್ವೆ ಬುಧವಾರ ಪ್ರಕಟಿಸಿದೆ. ರೈಲು ಆ.16ರಿಂದ ಪ್ರತಿ ದಿನ ಸಂಚರಿಸಲಿದೆ.

06602 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 5.30ಕ್ಕೆ ಪ್ರಯಾಣ ಆರಂಭಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಮಡಗಾಂವ್ ತಲುಪಲಿದೆ. 06601 ಸಂಖ್ಯೆಯ ರೈಲು ಮಧ್ಯಾಹ್ನ 2.30ಕ್ಕೆ ಮರುಪ್ರಯಾಣ ಆರಂಭಿಸಲಿದ್ದು, ರಾತ್ರಿ 9.40ಕ್ಕೆ ಮಂಗಳೂರು ತಲುಪಲಿದೆ.

ರೈಲಿಗೆ ಜಿಲ್ಲೆಯಲ್ಲಿ ಶಿರೂರು, ಭಟ್ಕಳ, ಚಿತ್ರಾಪುರ, ಮುರುಡೇಶ್ವರ, ಮಂಕಿ, ಹೊನ್ನಾವರ, ಕುಮಟಾ, ಮಿರ್ಜಾನ್, ಗೋಕರ್ಣ ರೋಡ್, ಅಂಕೋಲಾ, ಹಾರವಾಡ, ಕಾರವಾರದಲ್ಲಿ ನಿಲುಗಡೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು