ಸೋಮವಾರ, ಮೇ 23, 2022
28 °C

ಬೇಟೆಯಾಡಲು ಮರವೇರಿದ್ದ ಚಿರತೆ ವಿದ್ಯುತ್ ಸ್ಪರ್ಶಿಸಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ತಾಲ್ಲೂಕಿನ ಬೆಳಕೆ ವಲಯದ ಕೆಕ್ಕೋಡಿನಲ್ಲಿ ಭಾನುವಾರ ಗಂಡು ಚಿರತೆಯೊಂದು ವಿದ್ಯುತ್ ಆಘಾತದಿಂದ ಮೃತಪಟ್ಟಿದೆ.

ಮಂಗನನ್ನು ಬೇಟೆಯಾಡಲು ಮರವನ್ನೇರಿದ್ದ ಚಿರತೆಯ ಬಾಲವು ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಚಿರತೆಗೆ ಸುಮಾರು 10 ವರ್ಷಗಳಾಗಿರಬಹುದು. ಅದರ ಬಾಲದ ಕೂದಲು ವಿದ್ಯುತ್ ಲೈನ್‌ನಲ್ಲಿ ಅಂಟಿಕೊಂಡಿದೆ. ಅಲ್ಲದೇ ಬಾಲದ ತುದಿಯಲ್ಲಿ ಸುಟ್ಟಿರುವ ಗುರುತಿದೆ. ಅದರ ಒಂದು ಉಗುರು ಕಾಣೆಯಾಗಿದ್ದು, ನೋವಿನಿಂದ ಮರವನ್ನು ಪರಚಿಕೊಂಡು ಕೆಳಗೆ ಇಳಿಯುವಾಗ ಕಳಚಿರುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸವಿತಾ ದೇವಾಡಿಗ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು