ಭಾನುವಾರ, ಜೂನ್ 13, 2021
22 °C

ಮಾರಿಕಾಂಬಾ ದೇವಾಲಯ: ಧರ್ಮದರ್ಶಿ ಮಂಡಳಿಗೆ ರವೀಂದ್ರ ನಾಯ್ಕ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ನೂತನ ಧರ್ಮದರ್ಶಿ ಮಂಡಳದ ಅಧ್ಯಕ್ಷರಾಗಿ ನಿವೃತ್ತ ಎಸಿಎಫ್ ರವೀಂದ್ರ ಜಿ.ನಾಯ್ಕ, ಉಪಾಧ್ಯಕ್ಷರಾಗಿ ಬಿಎಸ್ಎನ್ಎಲ್ ನಿವೃತ್ತ ಎಂಜಿನಿಯರ್ ಸುದೇಶ ಜೋಗಳೆಕರ್ ಆಯ್ಕೆಯಾದರು. ಮಂಡಳಿಯ ಇತರ ಮೂವರು ಸದಸ್ಯರೊಂದಿಗೆ ದೇವಾಲಯದ ಪ್ರಾಮಗಣದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಿ.ರಾಜಶೇಖರ ಆನ್ ಲೈನ್ ಮೂಲಕ ಪ್ರಮಾಣ ವಚನ ಬೋಧಿಸಿದರು. ಮುಂದಿನ ಐದು ವರ್ಷದ ಅವಧಿಗೆ ಧರ್ಮದರ್ಶಿ ಮಂಡಳ ಅಧಿಕಾರ ನಡೆಸಲಿದ್ದು ಸದಸ್ಯರಾಗಿ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ ಮತ್ತು ವಿಶ್ವನಾಥ ಶೆಟ್ಟಿ ನೇಮಕಗೊಂಡಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಾಂತವೀರ ಶಿವಪ್ಪ, ಈ ಹಿಂದಿನ ಆಡಳಿತ ಮಂಡಳಿ ಸದಸ್ಯರು, ಬಾಬುದಾರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು