ಸೋಮವಾರ, ಸೆಪ್ಟೆಂಬರ್ 20, 2021
21 °C

‘ಕೈಗಾ’ಕ್ಕೆ ಉನ್ನತಾ ಸುರಕ್ಷಾ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕಗಳಿಗೆ ಒಂದರಿಂದ ನಾಲ್ಕು ಘಟಕಗಳಿಗೆ ರಾಷ್ಟ್ರೀಯ ಸುರಕ್ಷಾ ಮಂಡಳಿಯ ಕರ್ನಾಟಕ ವಿಭಾಗವು ‘ಉನ್ನತಾ ಸುರಕ್ಷಾ ಪುರಸ್ಕಾರ – 2021’ ಪ್ರದಾನ ಮಾಡಿದೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ 3 ಮತ್ತು 4 ಘಟಕಗಳ ನಿರ್ದೇಶಕ ಟಿ.ಪ್ರೇಮಕುಮಾರ, 1 ಮತ್ತು 2 ಘಟಕಗಳ ನಿರ್ದೇಶಕ ಪ್ರಮೋದ ಜಿ.ರಾಯಚೂರ ಸ್ವೀಕರಿಸಿದರು. ಸುರಕ್ಷಾ ವಿಭಾಗ ಪ್ರಮುಖರಾದ ಜಯಪ್ರಕಾಶ್ ಹೆಗಡೆ ಮತ್ತು ಮೈಕೆಲ್ ಟೋಮಿ, ಕೈಗಾ ನೌಕರರ ಸಂಘದ ಅಧ್ಯಕ್ಷ ಸುಮಂತ್ ಹೆಬ್ಳೇಕರ್, ನೌಕರರ ಸಂಘದ ಜತೆ ಕಾರ್ಯದರ್ಶಿ ವಿಜಯಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು