ಸೋಮವಾರ, ಸೆಪ್ಟೆಂಬರ್ 26, 2022
20 °C

ಕಾರವಾರ: ಬಲೆಗೆ ಸಿಲುಕಿದ ಆಲಿವ್ ರಿಡ್ಲೆ ಆಮೆಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ  ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ಬುಧವಾರ (ಆ.17), ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು. 

ಸ್ಥಳೀಯ ಮೀನುಗಾರರು ಅವುಗಳನ್ನು ಬಲೆಯಿಂದ ಬಿಡಿಸಿದರು. ಒಂದನ್ನು ಸಮುದ್ರಕ್ಕೆ ಮರಳಿ ಕಳುಹಿಸಲಾಯಿತು. 
ಗಾಯಗೊಂಡ ಮತ್ತೊಂದು ಆಮೆಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದ್ದು, ಆರೈಕೆ ಮಾಡಲಾಗುತ್ತಿದೆ. 

ವಲಯ ಅರಣ್ಯ ಸಂರಕ್ಷಣಾಧಿಕಾರಿ (ಮರೈನ್) ಪ್ರಮೋದ್ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು