ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಇಳಿಯಿತು, ಬೆಳ್ಳುಳ್ಳಿ ಏರಿತು!

Last Updated 3 ಅಕ್ಟೋಬರ್ 2019, 14:00 IST
ಅಕ್ಷರ ಗಾತ್ರ

ಕಾರವಾರ: ಕಳೆದ ವಾರ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದರ ಈ ಬಾರಿ ಸ್ವಲ್ಪ ಇಳಿದಿದೆ. ಪ್ರತಿ ಕೆ.ಜಿ.ಗೆ ₹ 40ರಂತೆ ಮಾರಾಟವಾಗುತ್ತಿದೆ.ಈರುಳ್ಳಿ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದ್ದರ ಪರಿಣಾಮ ಇಲ್ಲಿ ಕಾಣುತ್ತಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.

ಒಂದು ತಿಂಗಳ ಹಿಂದೆಈರುಳ್ಳಿ ಕಿಲೋಗೆ ₹ 20ರಿಂದ ₹ 30ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಆದರೆ, ಕಳೆದ ವಾರ ನಿರಂತರ ಏರಿಕೆ ಕಂಡು ₹ 40ರಿಂದ ₹ 45ಕ್ಕೆ ತಲುಪಿತ್ತು. ವಾರಾಂತ್ಯದಲ್ಲಿ ₹ 50ಕ್ಕೆ ತಲುಪಿ ಗ್ರಾಹಕರಿಗೂ, ವರ್ತಕರಿಗೂ ಹೊರೆಯಾಗಿತ್ತು.

‘ಈಗ ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಿ ಹಳೆಯ ದರಕ್ಕೆ ತಲುಪಬಹುದು ಎಂಬ ನಿರೀಕ್ಷೆಯಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸಂಗಮೇಶ.

ಈ ವಾರ ಬೆಳ್ಳುಳ್ಳಿ ದರ ಏರಿಕೆಯಾಗಿದೆ. ಕೆ.ಜಿ.ಗೆ ₹ 180ರ ಆಸುಪಾಸು ಇದ್ದುದು ಈಗ ₹ 200ಕ್ಕೆ ಏರಿಕೆ ಕಂಡಿದೆ. ಇದೇ ರೀತಿ ಟೊಮೊಟೊ ದರ ಕೂಡ ಹೆಚ್ಚಾಗಿದ್ದು, ಕೆ.ಜಿ.ಗೆ ₹ 40ಕ್ಕೆ ತಲುಪಿದೆ. ನಗರದ ಮಾರುಕಟ್ಟೆಗೆ ಆಂಧ್ರಪ್ರದೇಶದ ಗುಡೂರಿನಿಂದ ಲಿಂಬು ಆವಕವಾಗುತ್ತಿದೆ. ಹಾಗಾಗಿಅದರದರ ಇಳಿದಿದ್ದು, ₹ 20ಕ್ಕೆ ನಾಲ್ಕು ಸಿಗುತ್ತಿದೆ. ಕಳೆದ ವಾರ ₹ 50ಕ್ಕೆ ಆರರಂತೆ ಮಾರಾಟವಾಗಿತ್ತು.

–––––

ಕಾರವಾರ ಮಾರುಕಟ್ಟೆ

ತರಕಾರಿ ದರ (₹ಗಳಲ್ಲಿ)

ಆಲೂಗಡ್ಡೆ; 25

ಟೊಮೆಟೊ; 40

ಸೌತೆಕಾಯಿ; 50

ತೊಂಡೆಕಾಯಿ; 50

ಬೀನ್ಸ್ ಜವಾರಿ; 80

ಬೀನ್ಸ್ ಬೆಂಗಳೂರು; 60

ಬೆಂಡೆಕಾಯಿ; 60

ಕ್ಯಾರೆಟ್; 70

ಬೀಟ್‌ರೂಟ್; 60

ಕ್ಯಾಪ್ಸಿಕಂ; 70

ಬದನೆಕಾಯಿ; 50

ನವಿಲುಕೋಸು; 60

ಹೂಕೋಸು; 60

ಕ್ಯಾಬೇಜ್; 40

ಮೆಣಸಿನಕಾಯಿ; 80

ಬೆಳ್ಳುಳ್ಳಿ; 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT