ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಕಾಮಗಾರಿ ಹಂತಗಳಲ್ಲಿ ಆರಂಭ

ಬಂದರುಗಳ ಹೂಳೆತ್ತುವ ಬೇಡಿಕೆ ಪರಿಶೀಲನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 7 ಜೂನ್ 2020, 12:37 IST
ಅಕ್ಷರ ಗಾತ್ರ

ಕಾರವಾರ: ‘ಕಾರವಾರದಿಂದಉಳ್ಳಾಲವರೆಗಿನ 320 ಕಿಲೋಮೀಟರ್‌ ಕಡಲತೀರದಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ನೆರವಿನಲ್ಲಿ ಆರಂಭಿಸಿರುವವಿವಿಧ ಕಾಮಗಾರಿಗಳು ಬಾಕಿಯಿವೆ. ಅವುಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಗಾಬಿತಕೇಣಿಯಲ್ಲಿ ಕಡಲ್ಕೊರೆತವಾದ ಪ್ರದೇಶವನ್ನುಭಾನುವಾರ ವೀಕ್ಷಿಸಿದ ಅವರು, ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

‘ರಾಜ್ಯದಬಂದರುಗಳ ಹೂಳೆತ್ತಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ತಡೆಗೋಡೆಗಳ ರಚನೆಯೆಂದರೆ ಸಮುದ್ರಕ್ಕೆ ಕೇವಲ ಕಲ್ಲು ಹಾಕುವುದು ಎಂಬ ಆಪಾದನೆಯಿದೆ. ಈಗ ತುರ್ತಾಗಿ ಕಡಲತೀರಕ್ಕೆಕಲ್ಲು ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದರೆ, ಅದೇ ಕಲ್ಲನ್ನು ಶಾಶ್ವತ ತಡೆಗೋಡೆಗೆ ಬಳಸಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

‘ನೀಲಿಕ್ರಾಂತಿ’ ಯೋಜನೆ:‘ಕೇಂದ್ರ ಸರ್ಕಾರವು ಮೀನುಗಾರಿಕೆಯನ್ನು ಕೃಷಿಯ ಭಾಗವನ್ನಾಗಿ ಪರಿಗಣಿಸಿ ಸುತ್ತೋಲೆ ಹೊರಡಿಸಿದೆ. ಈ ಸಲ ಸುಮಾರು ₹ 20 ಸಾವಿರ ಕೋಟಿಯನ್ನು ದೇಶದಾದ್ಯಂತ ಮೀನುಗಾರಿಕೆಗಾಗಿ ವಿನಿಯೋಗಿಸಲುಉದ್ದೇಶಿಸಿದೆ. ‘ನೀಲಿಕ್ರಾಂತಿ’ ಯೋಜನೆಯಡಿ ರಾಜ್ಯಕ್ಕೆ ಐದು ವರ್ಷಗಳ ಅವಧಿಯಲ್ಲಿ ₹ 3.5 ಸಾವಿರ ಕೋಟಿಯಿಂದ ₹ 4 ಸಾವಿರ ಕೋಟಿ ಸಿಗಬಹುದು ಎಂದು ಅಂದಾಜಿಸಲಾಗಿದೆ’ ಎಂದರು.

‘ಮೂರು ವರ್ಷಗಳಲ್ಲಿ ರಾಜ್ಯದ ಮೀನುಗಾರಿಕೆ ಅಭಿವೃದ್ಧಿ, ಜಟ್ಟಿಗಳು, ಕಿರು ಬಂದರುಗಳ ನಿರ್ಮಾಣ, ಮೀನುಗಾರರಿಗೆ ಸವಲತ್ತು, ಪಂಜರ ಕೃಷಿಗೆ ಪ್ರೋತ್ಸಾಹ, ಮೀನಿನ ಮರಿಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕಳೆದ ಬಜೆಟ್‌ನಲ್ಲಿ 1,000 ಮೀನುಗಾರ ಮಹಿಳೆಯರಿಗೆ ಶೇ 50ರ ದರದಲ್ಲಿ ದ್ವಿಚಕ್ರ ವಾಹನಗಳನ್ನುಪ್ರಕಟಿಸಲಾಗಿತ್ತು. ಆ ಯೋಜನೆ ಸಕ್ರಿಯವಾಗಿದ್ದು,₹ 6 ಕೋಟಿ ಬಿಡುಗಡೆಯಾದ ಕೂಡಲೇ ವಾಹನಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಮೀನುಗಾರರ ಸಾಲಮನ್ನಾ ಯೋಜನೆಯಡಿ 2017–18, 2018–19ನೇ ಸಾಲಿಗೆ ₹ 60 ಕೋಟಿ ಮನ್ನಾ ಆಗಿದೆ. 23 ಸಾವಿರ ಜನರಿಗೆ ಪ್ರಯೋಜನವಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಗೆ ಶೇ 80, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆತಲಾ ಶೇ 10ರಷ್ಟು ಪಾಲು ಸಿಕ್ಕಿದೆ. ಆಯಾ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಹೆಚ್ಚು ಸಾಲ ಕೊಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನವ್ಯವಸ್ಥಾಪಕರನ್ನು ಕರೆದು ತಿಳಿಸುವಂತೆ ಶಾಸಕರಿಗೆಸೂಚಿಸಿದ್ದೇನೆ’ ಎಂದು ಹೇಳಿದರು.

‘ಒಂದು ವಾರದಲ್ಲಿ ಬಿಡುಗಡೆ’:‘ಜನವರಿಯಿಂದ ಮಾರ್ಚ್‌ವರೆಗೆ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಬರಬೇಕಿದ್ದು, ಹಣಕಾಸು ಇಲಾಖೆಗೆ₹ 33 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ.ಒಂದು ವಾರದಲ್ಲಿ ಬಿಡುಗಡೆಯಾಗಲಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

‘ಮೀನುಗಾರರಿಗೆ ಶೂನ್ಯ ಮತ್ತು ಶೇ 2ರ ಬಡ್ಡಿ ದರದಲ್ಲಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಕೊಡುತ್ತಿಲ್ಲ ಎಂಬ ವಿಚಾರ ಗೊತ್ತಾಗಿದೆ. ಈ ಸಂಬಂಧ 15 ದಿನಗಳಲ್ಲಿಪ್ರಮುಖರ ಸಭೆ ನಡೆಸಲಾಗುತ್ತದೆ.ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೀನುಗಾರರ ಉಳಿತಾಯ ಪರಿಹಾರ ಯೋಜನೆಗೆ, ಕೇಂದ್ರ ಸರ್ಕಾರವು ₹ 500 ಕೋಟಿ ಬಿಡುಗಡೆ ಮಾಡಿದ್ದು,ರಾಜ್ಯವೂ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT