ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ನನ್ನು ಕ್ಷಮಿಸಿ, ನಾನು ಕೊರೊನಾ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ'

Last Updated 30 ಮಾರ್ಚ್ 2020, 9:32 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಜನರು ಲಾಕ್‌ಡೌನ್‌‌ಗೆ ಸ್ಪಂದಿಸಿ ಮನೆಯಿಂದ ಹೊರಬೀಳುತ್ತಿಲ್ಲ. ಆದರೂ, ಕೆಲವು ಯುವಕರು ಲಾಕ್‌ಡೌನ್ ಆದೇಶ ಉಲ್ಲಂಘಿಸಿ, ಬೈಕ್ ಹಿಡಿದು ಪೇಟೆ ಕಡೆಗೆ ಹೋಗುತ್ತಿದ್ದಾರೆ.

ಜನಸಂಚಾರವನ್ನು ಸಂಪೂರ್ಣ ನಿಯಂತ್ರಿಸಿ, ಲಾಕ್‌ಡೌನ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಣತೊಟ್ಟಿರುವ ಪೊಲೀಸರು ಸೋಮವಾರದಿಂದ ಹೊಸ ತಂತ್ರ ಅನುಸರಿಸುತ್ತಿದ್ದಾರೆ.

ಆದೇಶ ಉಲ್ಲಂಘಿಸಿ ರಸ್ತೆಗೆ ಇಳಿದವರನ್ನು ತಡೆದು, ಅವರ ಕೈಯಲ್ಲಿ 'ನನ್ನನ್ನು ಕ್ಷಮಿಸಿ, ನಾನು ಕೊರೊನಾ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ' ಎಂಬ ಫಲಕವನ್ನು ಹಿಡಿಸಿ, ಫೋಟೊ ಕ್ಲಿಕ್ಕಿಸುತ್ತಿದ್ದಾರೆ.

ಡ್ರೋನ್ ಕ್ಯಾಮೆರಾ ಬಳಕೆ: ಕಸ್ತೂರಬಾ ನಗರ, ಹಳೆ ಬಸ್ ನಿಲ್ದಾಣ, ನಿಲೇಕಣಿ ಮೀನು ಮಾರುಕಟ್ಟೆ, ವಿಕಾಸಾಶ್ರಮ ಮೈದಾನದ ಬಳಿ ಡ್ರೋನ್ ಕ್ಯಾಮೆರಾದ ಮೂಲಕ ಜನಸಂಚಾರದ ಮೇಲೆ ನಿಗಾವಹಿಸಲಾಗುವುದು ಎಂದು ಡಿವೈಎಸ್ಪಿ ಜಿ.ಟಿ.ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT