ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: 78 ಜನರಿಗೆ ಕೋವಿಡ್ 19 ಖಚಿತ

ಸೋಂಕಿನಿಂದ ಗುಣಮುಖರಾದ 40 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ
Last Updated 20 ಜುಲೈ 2020, 13:42 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ 78 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಅದೇರೀತಿ, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ 40 ಮಂದಿಗುಣಮುಖರಾಗಿದ್ದಾರೆ.

ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿಅತಿ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಆ ಎರಡು ತಾಲ್ಲೂಕುಗಳಲ್ಲಿ ಒಟ್ಟು 39 ಮಂದಿಗೆ ಕೋವಿಡ್ ಖಚಿತವಾಗಿದೆ. ಉಳಿದಂತೆ, ಅಂಕೋಲಾ ಮತ್ತು ಭಟ್ಕಳ ತಾಲ್ಲೂಕಿನಲ್ಲಿ ಕೂಡ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಅಂಕೋಲಾದಲ್ಲಿ 16 ಹಾಗೂ ಭಟ್ಕಳದಲ್ಲಿ 13 ಮಂದಿಯಲ್ಲಿ ಸೋಂಕು ಇದೆ. ಕುಮಟಾ ತಾಲ್ಲೂಕಿನಲ್ಲಿ ಎಂಟು, ಮುಂಡಗೋಡ ಹಾಗೂ ಕಾರವಾರ ತಾಲ್ಲೂಕುಗಳಲ್ಲಿ ತಲಾ ಒಬ್ಬರಿಗೆ ಕೋವಿಡ್ ಖಚಿತವಾಗಿದೆಎಂದು ಆರೋಗ್ಯ ಇಲಾಖೆಯ ಬುಲೆಟಿನ್ ದೃಢಪಡಿಸಿದೆ.

ಹೊಸದಾಗಿ ಸೋಂಕಿತರಾದವರಲ್ಲಿ 64 ಜನರಿಗೆ ಈಗಾಗಲೇ ಕೋವಿಡ್ ಪೀಡಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದಲೇ ಸೋಂಕು ಹರಡಿದೆ. 10 ಮಂದಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸೋಂಕಿತರಲ್ಲಿ ಇಬ್ಬರಿಗೆಬೇರೆ ರಾಜ್ಯ, ನಗರಗಳಿಗೆ ಪ್ರವಾಸ ಮಾಡಿದ ಹಿನ್ನೆಲೆಯಿದೆ. ಒಬ್ಬರು ಅಂತರರಾಷ್ಟ್ರೀಯ ಪ್ರವಾಸದಿಂದ ಮರಳಿದವರಾಗಿದ್ದಾರೆ. ಮತ್ತೊಬ್ಬರು ಜ್ವರದ ಲಕ್ಷಣ (ಐ.ಎಲ್.ಐ) ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

ರೋಗ ಲಕ್ಷಣ ಇಲ್ಲದ ಸೋಂಕಿತರದನ್ನು ಆಯಾ ತಾಲ್ಲೂಕುಗಳಲ್ಲಿ ಆರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಸೋಂಕಿನ ಲಕ್ಷಣ ಇರುವವರನ್ನು ಮಾತ್ರ ಕಾರವಾರದ ವೈದ್ಯಕೀಯ ವಿಜ್ಞಾನಗಳ ಕೇಂದ್ರದಲ್ಲಿರುವ ಕೋವಿಡ್ ವಾರ್ಡ್‌ಗೆ ಕರೆದುಕೊಂಡು ಬರಲಾಗಿದೆ.

40 ಮಂದಿ ಗುಣಮುಖ:ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೋವಿಡ್‌ನಿಂದ40 ಮಂದಿ ಗುಣಮುಖರಾಗಿದ್ದಾರೆ. ಅವರನ್ನು ಆಯಾ ಆರೈಕೆ ಕೇಂದ್ರಗಳಿಂದ ಸೋಮವಾರ ಬಿಡುಗಡೆ ಮಾಡಲಾಯಿತು.ಈ ಪೈಕಿ ಕುಮಟಾದಲ್ಲಿ 19, ಮುಂಡಗೋಡದಲ್ಲಿ 14, ಕಾರವಾರದಲ್ಲಿ ಐವರು, ಹೊನ್ನಾವರ ಹಾಗೂ ಶಿರಸಿಯಲ್ಲಿ ತಲಾ ಒಬ್ಬರು ಸೇರಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪೀಡಿತರು ಇರುವ (294) ಭಟ್ಕಳ ತಾಲ್ಲೂಕಿನಲ್ಲಿ ಸದ್ಯ 83 ಸಕ್ರಿಯ ಪ್ರಕರಣಗಳಿವೆ. ಈವರೆಗೆ 207 ಮಂದಿ ಗುಣಮುಖರಾಗಿದ್ದಾರೆ. 216 ಸೋಂಕಿತರಾಗಿದ್ದ ಹಳಿಯಾಳ ಮತ್ತು ದಾಂಡೇಲಿಯಲ್ಲಿ ಈಗ 184 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 31 ಮಂದಿ ಬಿಡುಗಡೆಯಾಗಿದ್ದಾರೆ.

150 ಮಂದಿ ಸೋಂಕಿತರಾಗಿರುವ ಕುಮಟಾದಲ್ಲಿ 95 ಸಕ್ರಿಯ ಪ್ರಕರಣಗಳಿದ್ದು, 55 ಮಂದಿ ಗುಣಮುಖರಾಗಿದ್ದಾರೆ. 90 ಮಂದಿ ರೋಗಿಗಳಿದ್ದ ಶಿರಸಿಯಲ್ಲಿ 53 ಮಂದಿ ಆಸ್ಪತ್ರೆಯಲ್ಲಿದ್ದರೆ, 36 ಮಂದಿ ಬಿಡುಗಡೆಯಾಗಿದ್ದಾರೆ. ಅಂತೆಯೇ 90 ಮಂದಿ ಸೋಂಕಿತರಿದ್ದ ಹೊನ್ನಾವರದಲ್ಲಿ 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

–––––

ಉತ್ತರ ಕನ್ನಡದಲ್ಲಿ ಕೊರೊನಾ: ಅಂಕಿ ಅಂಶ

1,163

ಒಟ್ಟು ಸೋಂಕಿತರು

668

ಸಕ್ರಿಯ ಪ್ರಕರಣಗಳು

485

ಗುಣಮುಖರಾದವರು

10 ಮೃತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT