ಭಾನುವಾರ, ಸೆಪ್ಟೆಂಬರ್ 19, 2021
23 °C

ಇತಿಹಾಸ ಪ್ರಿಯರಿಗೆ ಕುತೂಹಲ ಮೂಡಿಸಿದ ಗದ್ದೆಯ ಬದುವಿನಲ್ಲಿನ ‘ದಿಬ್ಬಣಗಲ್ಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಲ್ಲೊಂದು ಮಹಾದೇವ ದೇವಸ್ಥಾನ. ಅದರ ಎದುರು ವಿಶಾಲವಾದ ಗದ್ದೆ. ಅದರ ಬದುಗಳಲ್ಲಿ 10ಕ್ಕೂ ಅಧಿಕ ವಿಶೇಷ ಕಲ್ಲುಗಳು.

ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿರ್ಜೆ ಎಂಬಲ್ಲಿರುವ ಈ ಕಲ್ಲುಗಳು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರ ಕುತೂಹಲಕ್ಕೆ ಕಾರಣವಾಗಿದೆ. ಕಪ್ಪು ಕಲ್ಲುಗಳ ಮೇಲೆ ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ಮಾಸ್ತಿಗಲ್ಲು, ವೀರಗಲ್ಲುಗಳ ಮಾದರಿಯಲ್ಲೇ ಇವುಗಳಿದ್ದು, ನೋಡಲೂ ಆಕರ್ಷಕವಾಗಿವೆ.

ಗ್ರಾಮದ ಹಿರಿಯ 80 ವರ್ಷದ ಗಣಪತಿ ತಿಮ್ಮಾಗೌಡ ಹೇಳುವ ಪ್ರಕಾರ ಇವುಗಳನ್ನು ‘ದಿಬ್ಬಣಗಲ್ಲು’ಗಳೆಂದು ಕರೆಯಲಾಗುತ್ತದೆ. ‘ನಾನು ಸಣ್ಣವನಿದ್ದಾಗಿನಿಂದಲೂ ಈ ಕಲ್ಲುಗಳಿವೆ. ಎಷ್ಟು ವರ್ಷಗಳ ಇತಿಹಾಸ ಇದೆಯೋ ಗೊತ್ತಿಲ್ಲ. ಅದಕ್ಕೆ ಪೂಜೆ ಮಾಡುವುದಿಲ್ಲ. ಆದರೆ, ಮಹಾದೇವ ದೇವಸ್ಥಾನಕ್ಕೆ ಸೇರಿದ್ದು ಎಂದು ನಂಬಿದ್ದೇವೆ’ ಎಂದು ನೆನಪಿಸಿಕೊಂಡರು.

‘ನನ್ನ ಹಿರಿಯರು ಹೇಳಿದ ಪ್ರಕಾರ ಆ ಕಾಲದಲ್ಲಿ ಎರಡು ಮದುವೆಗಳ ದಿಬ್ಬಣಗಳು ಎದುರು– ಬದುರಾದವು. ಅದು ಅಶುಭ ಲಕ್ಷಣವಾಗಿತ್ತಂತೆ. ದೇವರ ಶಾಪದಿಂದ ಎಲ್ಲರೂ ಕಲ್ಲುಗಳಾದರಂತೆ’ ಎಂದು ನಕ್ಕರು. 

ತೆರೆದ ವಾತಾವರಣದಲ್ಲಿರುವ ಕಲ್ಲುಗಳು ನಿಧಾನವಾಗಿ ಬಿಸಿಲು, ಮಳೆಗೆ ಕರಗುತ್ತಿವೆ. ಅವುಗಳ ಇತಿಹಾಸವೇನು, ಯಾವ ಘಟನೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ಅಧ್ಯಯನ ಆಗಬೇಕು. ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಇತಿಹಾಸ ಪ್ರಿಯರ ಮನವಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು