ಶನಿವಾರ, ಮಾರ್ಚ್ 28, 2020
19 °C

ಜೋಡಿ ರೈಲು ಮಾರ್ಗ ಕಾಮಗಾರಿ: ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮಂಗಳೂರು– ಜಂಕ್ಷನ್ ಮತ್ತು ಪಣಂಬೂರು ರೈಲು ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿ ಫೆ.19ರಿಂದ 10 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. 

ಸಿ.ಎಸ್.ಟಿ– ಮಂಗಳೂರು ದೈನಂದಿನ ಎಕ್ಸ್‌ಪ್ರೆಸ್ (12133/ 12134) ರೈಲು ಫೆ.28ರವರೆಗೆ ಸುರತ್ಕಲ್‌ವರೆಗೆ ಮಾತ್ರ ಸಂಚರಿಸಲಿದೆ. ನಿಗದಿತ ವೇಳಾಪಟ್ಟಿಯಂತೆ ಅಲ್ಲಿಂದಲೇ ಮರು ಪ್ರಯಾಣ ಆರಂಭಿಸಲಿದೆ. 

ಮಡಗಾಂವ್– ಮಂಗಳೂರು ‘ಡೆಮು’ ಪ್ಯಾಸೆಂಜರ್ (70105/ 70106) ರೈಲು ತೋಕೂರಿನಲ್ಲೇ ನಿಲ್ಲಲಿದ್ದು, ಅಲ್ಲಿಂದಲೇ ಪುನಃ ಹೊರಡಲಿದೆ. ಫೆ.28ರಂದು ಮಂಗಳೂರು– ಮಡಗಾಂವ್– ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (22636 / 22635) ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. 13 ರೈಲುಗಳನ್ನು ಜೋಕಟ್ಟೆ ಮತ್ತು ಮಂಗಳೂರು ಜಂಕ್ಷನ್‌ನಲ್ಲಿ 15 ನಿಮಿಷದಿಂದ 90 ನಿಮಿಷಗಳವರೆಗೂ ನಿಲುಗಡೆ ಮಾಡಲಾಗುತ್ತದೆ. 

ಉಳಿದಂತೆ, ಎರ್ನಾಕುಲಂ, ಕೊಚುವೇಲಿ, ಚಂಡೀಗಡದತ್ತ ಪ್ರಯಾಣಿಸುವ ಎಂಟು ರೈಲುಗಳ ಪ್ರಯಾಣವನ್ನೂ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಆರು ರೈಲುಗಳ ವೇಳಾಪಟ್ಟಿಯನ್ನು ಮರು ಹೊಂದಾಣಿಕೆ ಮಾಡಲಾಗಿದೆ.

ಪ್ರಯಾಣಿಕರು ಸಹಕರಿಸುವಂತೆ ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಘಾಟ್ಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು