ಬುಧವಾರ, ಅಕ್ಟೋಬರ್ 23, 2019
27 °C

ಸಂಚಾರ ನಿಯಮ ಪಾಲನೆ ಜಾಗೃತಿ: ಹೆಲ್ಮೆಟ್ ಧರಿಸಿ ದಾಂಡಿಯಾ ನೃತ್ಯ ಮಾಡಿದ ಮಹಿಳೆಯರು

Published:
Updated:
ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಲ್ಮೆಟ್ ಧರಿಸಿ ನೃತ್ಯ ಮಾಡಿದರು

ಕಾರವಾರ: ನವರಾತ್ರಿ ಅಂಗವಾಗಿ ನಗರದ ಕೆ.ಎಚ್.ಬಿ ಕಾಲೊನಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಲ್ಮೆಟ್ ಧರಿಸಿ ನೃತ್ಯ ಮಾಡಿ ಗಮನ ಸೆಳೆದರು. ಈ ಮೂಲಕ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ನವರಾತ್ರಿಯ ಒಂಬತ್ತೂ ದಿನ ನಗರದ ವಿವಿಧ ಬಡಾವಣೆಗಳಲ್ಲಿ ದುರ್ಗಾದೇವಿ ಪೂಜಾ ಸಮಿತಿಗಳ ಮೂಲಕ ದಾಂಡಿಯಾ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಡಿ.ಜೆ ಸಂಗೀತ, ಬಣ್ಣ ಬಣ್ಣದ ವಿದ್ಯುದ್ದೀಪದ ಬೆಳಕಿನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಆರಂಭವಾಗುವ ನೃತ್ಯ ರಾತ್ರಿ 12ರವರೆಗೂ ಮುಂದುವರಿಯುತ್ತದೆ.

ಆ ಸ್ಥಳಗಳಲ್ಲಿ ನೂರಾರು ಜನರು ಸೇರುತ್ತಾರೆ. ಹಾಗಾಗಿ ಸಂಚಾರ ನಿಯಮ ಪಾಲನೆಯ ಜಾಗೃತಿ ಮೂಡಿಸಲು ಸೂಕ್ತ ಸ್ಥಳ ಎಂದು ಭಾವಿಸಿದ ಮಹಿಳೆಯರು ಹೆಲ್ಮೆಟ್ ಧರಿಸಿ ನೃತ್ಯ ಮಾಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)