ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಅಘನಾಶಿನಿ: ಮರಾಕಲ್ ಯೋಜನೆ ಸ್ಥಗಿತ

ಕುಮಟಾ: ನೀರಿಗಾಗಿ ಪಟ್ಟಣದ ಹಳೆಯ ಕೊಳವೆವಾವಿ, ತೆರೆದ ಬಾವಿಗಳ ಪುನಃಶ್ಚೇತನ
Last Updated 4 ಜೂನ್ 2019, 13:47 IST
ಅಕ್ಷರ ಗಾತ್ರ

ಕುಮಟಾ:ಹೊನ್ನಾವರ ಹಾಗೂ ಕುಮಟಾ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮರಾಕಲ್ ಯೋಜನೆಯ ಬಳಿ ಅಘನಾಶಿನಿ ನದಿ ಬತ್ತಿದೆ. ಹಾಗಾಗಿನೀರು ಸರಬರಾಜು ಸದ್ಯ ನಿಂತಿದೆ.ಸ್ಥಳೀಯ ನೀರಿನ ಮೂಲಗಳಿಂದ ಟ್ಯಾಂಕರ್ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.

ಈ ಯೋಜನೆಯಿಂದ ಒಂದು ತಿಂಗಳ ಹಿಂದೆಯೂ ನಿತ್ಯವೂ ನಾಲ್ಕುತಾಸು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ300 ಎಚ್.ಪಿ. ಪಂಪ್ ಅನ್ನು ವಾರಕ್ಕೊಮ್ಮೆ ಚಾಲೂ ಮಾಡಿದರೂನದಿಯಲ್ಲಿ ಸಂಗ್ರಹವಾದ ನೀರು ಮುಕ್ಕಾಲು ಗಂಟೆಯೊಳಗೆ ಬರಿದಾಗುತ್ತಿದೆ. ನದಿಯಲ್ಲಿ ನೀರು ಸಂಗ್ರಹ ಆಗುವವರೆಗೆ ಪಟ್ಟಣದ ಸರ್ಕಾರಿ ಹಾಗೂ ಖಾಸಗಿಕೊಳವೆಬಾವಿ ಮತ್ತು ತೆರೆದ ಬಾವಿಗಳಿಂದ ಟ್ಯಾಂಕರ್ ಮೂಲಕ ಜನರಿಗೆ ನೀರು ಸರಬರಾಜುಆಗಲಿದೆ.

‘ಮಣಕಿಯ ರಾಷ್ಟ್ರೀಯ ಹೆದ್ದಾರಿಯ ಯಾತ್ರಿ ಹೋಟೆಲ್ ಬಳಿ ಇರುವ ಖಾಸಗಿಕೊಳವೆಬಾವಿಯನ್ನುದುರಸ್ತಿ ಮಾಡಲಾಗಿದೆ. ಅಲ್ಲಿಂದದಿನವೂಟ್ಯಾಂಕರ್ ಮೂಲಕ ಪಟ್ಟಣಕ್ಕೆ ನೀರು ಒಯ್ಯಲಾಗುತ್ತಿದೆ. ಕೃಷಿ ಇಲಾಖೆ ಕಚೇರಿ ಆವರಣದಲ್ಲಿರುವ ಕೊಳವೆಬಾವಿ ದುರಸ್ತಿ ಮಾಡಿ ಅದರಿಂದ ನೀರು ಪಡೆಯಲಾಗುತ್ತಿದೆ. ಹೆಗಡೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಕೊಳವೆಬಾವಿಯಿಂದಹೆಗಡೆ ಗ್ರಾಮಕ್ಕೆ ಹಾಗೂ ಸರ್ಕಾರಿ ಆಸ್ಪತ್ರೆಗೆ ನಿತ್ಯ 10 ಸಾವಿರ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದುಶಾಸಕ ದಿನಕರ ಶೆಟ್ಟಿ ಮಾಹಿತಿ ನೀಡಿದರು.

‘ಕೊಪ್ಪಳಕರವಾಡಿಯಲ್ಲಿ ತೆರೆದ ಬಾವಿ ದುರಸ್ತಿ ಮಾಡಿ ಸ್ಥಳೀಯರಿಗೆ ನೀರು ಸಿಗುವಂತೆ ಮಾಡಲಾಗಿದೆ. ಹಳೆಯ ಮೀನು ಮಾರುಕಟ್ಟೆ ಹತ್ತಿರ ಇರುವ ಬಾವಿಯನ್ನು ನೀರಿನ ತುರ್ತು ಸರಬರಾಜು ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಕೋರ್ಟ್ ರಸ್ತೆಯ ಬಳಿ ಒಂದುಕೊಳವೆವಬಾವಿದುರಸ್ತಿ ಮಾಡಿ ಹ್ಯಾಂಡ್ ಪಂಪ್ ಅಳವಡಿಸಲಾಗಿದೆ. ತಾಲ್ಲೂಕಿನ ಕಿಮಾನಿಯ ಮುಸ್ಲಿಂ ಕೇರಿಯಲ್ಲಿ ಹಾಗೂ ಮೂರೂರಿನ ಹೊಸಳ್ಳಿಯಲ್ಲಿ ಕೊರೆಯಿಸಿದ ಹೊಸಕೊಳವೆಬಾವಿಯಿಂದಲೂಸ್ಥಳೀಯರು ನೀರು ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT