ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮೊಬೈಲ್ ಚಾರ್ಜರ್‌ ಕಚ್ಚಿ 8 ತಿಂಗಳ ಮಗು ಸಾವು

Published 2 ಆಗಸ್ಟ್ 2023, 6:56 IST
Last Updated 2 ಆಗಸ್ಟ್ 2023, 6:56 IST
ಅಕ್ಷರ ಗಾತ್ರ

ಕಾರವಾರ: ಮೊಬೈಲ್ ಚಾರ್ಜರ್‌ನಿಂದ ಶಾಕ್ ತಗುಲಿ 8 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಸಿದ್ದರ ಗ್ರಾಮದಲ್ಲಿ‌ ಬುಧವಾರ ನಡೆದಿದೆ.

ಸಿದ್ದರದ ಹೆಸ್ಕಾಂ ಹೊರಗುತ್ತಿಗೆ ಉದ್ಯೋಗಿ ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿ ಅವರ 8 ತಿಂಗಳ ಮಗು ಸಾನಿಧ್ಯಾ ಸಾವನ್ನಪ್ಪಿದ್ದಾಗಿದೆ.‌ ಪೋಷಕರು ಮೊಬೈಲ್ ಚಾರ್ಜ್ ಹಾಕಿ ಆಫ್ ಮಾಡದೇ ಹಾಗೆ ಇಟ್ಟಿದ್ದರು ಎನ್ನಲಾಗಿದೆ. ಆನ್ ಇದ್ದ ಮೊಬೈಲ್ ಚಾರ್ಜರ ಅನ್ನು ಮಗು ಬಾಯಲ್ಲಿಟ್ಟುಕೊಂಡಿದ್ದು ಇದರಿಂದಾಗಿ ಶಾಕ್‌ ತಗುಲಿ ಸಾವನ್ನಪ್ಪಿದ್ದಾಳೆ.

ಕಾರವಾರ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT