ಶಿರಸಿ: ಡ್ರೋಣ್ ಮೂಲಕ ಬೆಳೆಯ ಮೇಲೆ ನ್ಯಾನೊ ರಸಗೊಬ್ಬರ ಸಿಂಪಡಣೆಯ ಪ್ರಾತ್ಯಕ್ಷಿಕೆ ತಾಲ್ಲೂಕಿನ ಕಬ್ಬೆಯಲ್ಲಿ ನಡೆಯಿತು.

ಡ್ರೋಣ್ ಮೂಲಕ ರೈತರ ಭತ್ತದ ಗದ್ದೆಗೆ ನ್ಯಾನೋ ಡಿಎಪಿ, ನ್ಯಾನೋ ಯೂರಿಯಾ ಹಾಗೂ ರಸಗೊಬ್ಬರ ಸಿಂಪಡಣೆ ಮಾಡಿ, ರೈತರಿಗೆ ಇದರ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಮಾಹಿತಿ ನೀಡಿ, ನ್ಯಾನೋ ಯೂರಿಯಾದಿಂದ ಕೃಷಿ ಉತ್ಪನ್ನಗಳ ಉತ್ಪಾದಕತೆ, ಗುಣಮಟ್ಟ, ಮಣ್ಣಿನ ಆರೋಗ್ಯ ಸುಧಾರಿಸುತ್ತದೆ. ನ್ಯಾನೋ ರಸಗೊಬ್ಬರಗಳನ್ನು ಕೃಷಿ ರಾಸಾಯನಿಕಗಳೊಂದಿಗೆ ಬೆರೆಸಿ ಸಿಂಪಡಣೆ ಮಾಡಬಹುದು. ನ್ಯಾನೋ ಡಿಎಪಿ ದ್ರವದೊಂದಿಗಿನ ಬೀಜ, ಮೊಳಕೆ ಸಂಸ್ಕರಣೆಯು ಉತ್ತಮ ಮೊಳಕೆಯೊಡೆಯುವಿಕೆ, ಬೇರಿನ ಬೆಳವಣಿಗೆಗೆ ಕಾರಣವಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಸಂಗ್ರಹಿಸಲು ಮತ್ತು ಸಾಗಾಟ ಸುಲಭವಾಗಿದೆ. ನ್ಯಾನೋ ಸಾಗರಿಕವು ಸಸ್ಯಗಳ ಹಾಗೂ ಬೇರುಗಳ ಬೆಳವಣಿಗೆ ವೃದ್ಧಿಸುತ್ತದೆ. ಕಾಳು ಮತ್ತು ಹಣ್ಣುಗಳ ಉತ್ಪಾದನಾ ಕಾರ್ಯದಲ್ಲಿ ವೃದ್ಧಿ ಮಾಡುತ್ತದೆ. ಕ್ರಿಮಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಡ್ರೋಣ್ ಮೂಲಕ ಸಿಂಪಡಣೆ ಬೆಳೆಗಳಿಗೆ ಅನುಕೂಲ ಎಂದರು.

ಪ್ರಗತಿಪರ ರೈತ ವೆಂಕಟೇಶ ಮಾತನಾಡಿ, ಕಾರ್ಮಿಕರ ಕೊರತೆಯಿಂದ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದು ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.