ಶಿರಸಿ: ಬನವಾಸಿಯಲ್ಲಿ ಕದಂಬೋತ್ಸವವನ್ನು ಬಿಜೆಪಿ ಉತ್ಸವ ಆಗಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದು ಈ ವೇಳೆ ಸಂತೆಪೇಟೆ ರಸ್ತೆಯಲ್ಲಿ ಮುಖ್ಯಮಂತ್ರಿ ವಾಹನದ ಎದುರು ಪ್ರತಿಭಟಿಸಿದರು.
'ಬನವಾಸಿ ಕೆರೆ ತುಂಬಿಸುವ ಯೋಜನೆ, ಅಭಿವೃದ್ಧಿ ಪ್ರಾಧಿಕಾರ ರಚನೆ ಕಾಂಗ್ರೆಸ್ ಸರ್ಕಾರ ಮಾಡಿದ್ದು. ಬಿಜೆಪಿ ಅದನ್ನು ತನ್ನ ಸಾಧನೆ ಎಂದು ಬಿಂಬಿಸಲು ಹೊರಟಿದೆ' ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಆರೋಪಿಸಿದರು.
'ಕದಂಬೋತ್ಸವ ನಾಡಿನ ಸಾಂಸ್ಕೃತಿಕ ಉತ್ಸವ. ಆದರೆ ಉತ್ಸವದ ವೇಳೆ ಬನವಾಸಿ ಪಟ್ಟಣದ ಉದ್ದಕ್ಕೂ ಬಿಜೆಪಿ ಬಾವುಟ ಹಾಕಲಾಗಿದೆ. ಪಕ್ಷದ ಚಿಹ್ನೆ ಇರುವ ಟೀಶರ್ಟ್ ಹಾಕಿದ ಕಾರ್ತಕರ್ತರೆ ಎಲ್ಲ ಕಡೆ ಅಡ್ಡಾಡುತ್ತಿದ್ದಾರೆ' ಎಂದು ಆರೋಪಿಸಿದರು.
ಪ್ರತಿಭಟನೆ ಕೈಬಿಡಲು ಒಪ್ಪದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರಮುಖರಾದ ಶ್ರೀನಿವಾಸ ಭಟ್ ಧಾತ್ರಿ, ಪ್ರಸನ್ನಕುಮಾರ, ಸುಧಾಕರ ನಾಯ್ಕ ಅಂಡಗಿ, ಮಧುಕೇಶ್ವರ ಗುಡ್ನಾಪುರ, ಇತರರು ಇದ್ದರು.
ಇವನ್ನೂ ಓದಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.