ಭಟ್ಕಳ: ತರಕಾರಿ ವ್ಯಾಪಾರಿ ಅನ್ವರ್ ಭಾಷಾ ಮಹಮ್ಮದ್ ಸಾಬ್ ಎಂಬುವವರಿಗೆ ದೂರವಾಣಿ ಕರೆ ಮಾಡಿ ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಮೂವರನ್ನು ಬಂಧಿಸುವಲ್ಲಿ ಶಹರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಭಟ್ಕಳದ ಅಬ್ದುಹುರೇರಾ ಕಾಲೊನಿ ನಿವಾಸಿ ಮೊಹಮ್ಮದ ಫಾರಿಸ್ ಅಬ್ದುಲ್ ಮುತಲ್ಲಬ್ ಕೋಡಿ (20), ಮೂಸಾ ನಗರದ ನಿವಾಸಿ ಮೊಹಮ್ಮದ ಅರ್ಶದ ಮೊಹಮ್ಮದ ಜುಬೇರ್ ಬ್ಯಾರಿ (22) ಹಾಗೂ ಕುಂದಾಪುರ ಹಾಲಾಡಿಯ ಜನತಾ ಕಾಲೊನಿ ನಿವಾಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಅಮನ್ ಮಸೂದ ಖಾನ್ (20) ಬಂಧಿತರು.

ತನಿಖೆ ಕೈಗೊಂಡ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನ ಮತ್ತು ಭಟ್ಕಳ ನಗರ ಪೊಲೀಸ್ ಠಾಣೆಯ ನವೀನ ಎಸ್. ನಾಯ್ಕ ಪಿ.ಎಸ್.ಐ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.