ಭಟ್ಕಳ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮ ಪೋಷಿಸುವ, ಸಂಶೋಧನಾ ಆಧಾರಿತ ಕಲಿಕೆಯನ್ನು ಉತ್ತೇಜಿಸುವ, ವಿಶ್ಲೇಷಣಾತ್ಮಕ ಚಿಂತನೆ ಬೆಳೆಸುವ ವಿಜ್ಞಾನ ಮೇಳ ತಾಲ್ಲೂಕಿನ ಶನಿವಾರ ಶಮ್ಸ್ ಪಿ.ಯು. ಕಾಲೇಜಿನ ಡಾ. ಎಂ.ಟಿ. ಹಸನ್ಬಾಪಾ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳ ತಯಾರಿಸಿದ ವಿವಿಧ ಮಾದರಿಗಳು ಮೇಳದಲ್ಲಿ ಗಮನ ಸೆಳೆದವು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂಜುಮನ್ ಹಾಮಿ– ಇ– ಮುಸ್ಲಿಮೀನ್ ಸಂಸ್ಥೆಯ ಉಪಾಧ್ಯಕ್ಷ ಮೊಹಮ್ಮದ್ ಜುಬೈರ್ ಕೋಲಾ, ಶಿಕ್ಷಣದ ಮಹತ್ವ ಮತ್ತು ಶಾಲಾ ಮಟ್ಟದಲ್ಲಿಯೇ ಸಂಶೋಧನಾ ದೃಷ್ಟಿಕೋನವನ್ನು ಬೆಳೆಸುವ ಅಗತ್ಯತೆ ಕುರಿತು ತಿಳಿಸಿದರು.

ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ವಿ. ಶಾನಭಾಗ್, ಕೌಶಲ ಆಧಾರಿತ ಕಲಿಕೆಯ ಮಹತ್ವದ ಬಗ್ಗೆ, ಎಜೆ ಅಕಾಡೆಮಿ ಆಫ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅವರು ಸಂಶೋಧನೆಯಲ್ಲಿ ಸ್ವಂತಿಕೆ, ವಿಧಾನ ಮತ್ತು ವೈಜ್ಞಾನಿಕ ಕಠಿಣತೆಯ ಅಗತ್ಯ ಕುರಿತು ತಿಳಿಸಿದರು.

ತರಬಿಯತ್ ಎಜ್ಯುಕೇಶನ್ ಸೊಸೈಟಿ ಛೇರ್ಮನ್ ನಝೀರ್ ಆಹ್ಮದ್ ಖಾಝ, ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಕ್ಷ ಸೈಯದ್ ಖುತುಬ್ ಬರ್ಮಾವರ್ ನದ್ವಿ, ಮೌಲಾನ್ ಅಝೀಝುರ್ರಹ್ಮಾನ್ ನದ್ವಿ, ಸೈಯ್ಯದ್ ಶಕೀಲ್ ಎಸ್.ಎಂ, ಇದ್ದರು.

ಪ್ರಾಂಶುಪಾಲ ಲಿಯಾಖತ್ ಅಲಿ ಸ್ವಾಗತಿಸಿದರು. ಶಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ರಜಾ ಮಾನ್ವಿ ನಿರ್ಣಾಯಕರನ್ನು ಪರಿಯಿಸಿದರು. ಸೈನ್ ಫೇರ್ ಸಂಚಾಲಕಿ ಮಮತಾ ನಾಯ್ಕ ವಂದಿಸಿದರು.

ವಿಜ್ಞಾನ ಮೇಳದಲ್ಲಿ ಒಟ್ಟು 10 ಸಂಸ್ಥೆಗಳ 52 ತಂಡಗಳು ತಮ್ಮ ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.