ಸಿದ್ದಾಪುರ: ವಿಶಿಷ್ಟಚೇತನ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಆಗಬೇಕಾಗಿದೆ. ಪಾಲಕರು ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.

ಸ್ಥಳೀಯ ಆಶಾಕಿರಣ ಟ್ರಸ್ಟ್, ಜಗದ್ಗುರು ಮುರಘ ರಾಜೇಂದ್ರ ಅಂಧಮಕ್ಕಳ ವಸತಿ ಶಾಲೆ, ಲಯನ್ಸ್ ವಿಶೇಷಚೇತನರ ವೃತ್ತಿಪರ ತರಬೇತಿ ಕೇಂದ್ರದಿಂದ ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಹಾಳದಕಟ್ಟಾ ಅಂಧ ಮಕ್ಕಳ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮಾತನಾಡಿ, ವ್ಯಕ್ತಿಯ ಅಂಗವೈಕಲ್ಯವನ್ನು ಕಂಡು ಅಪಹಾಸ್ಯ ಮಾಡದೆ ಅವಕಾಶ ಕಲ್ಪಿಸಲು ಮುಂದಾಗಬೇಕು. ಅವರ ಪ್ರತಿಭೆಗೆ ಚಾಲನೆ ದೊರಕಿದಲ್ಲಿ ಮುಂದೊಂದು ದಿನ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎಂದರು.

ಸ್ಥಳೀಯ ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ ಕಲ್ಲಾಳ, ವಿಶೇಷಚೇತನರ ತಾಲ್ಲೂಕು ಪರಿವೀಕ್ಷಕ ಶ್ರೀಧರ ಹರಗಿ, ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರವಿ ಆರ್. ಹೆಗಡೆ, ಆಶಾಕಿರಣ ಟ್ರಸ್ಟ್ನ ವಿ.ಎಸ್. ಶೇಟ್, ಟ್ರಸ್ಟಿನ ಉಪಾಧ್ಯಕ್ಷ ಸಿ.ಎಸ್. ಗೌಡರ ಹೆಗ್ಗೋಡ್ಮನೆ ಇದ್ದರು.

ಸಹನಾ ಸ್ವಾಗತಿಸಿದರು. ಚಿನ್ನಪ್ಪ ವಂದಿಸಿದರು. ಮೇಧಾ ಭಟ್ ಹೋಬಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.