ತಾಲ್ಲೂಕಿನ ಹುಲೇಕಲ್ ಗ್ರಾಮದ ಹಂಚರಟ್ಟಾದ ಮುಸ್ಲಿಂ ಗಲ್ಲಿ ನಿವಾಸಿ ಅಬ್ದುಲ್ ರೆಹಮಾನ (22) ವಿದೇಶಕ್ಕೆ ತೆರಳಲು ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ. ಈ ಬಗ್ಗೆ ಈತನ ವಿರುದ್ಧ ಗ್ರಾಮೀಣ ಪೊಲೀಸ್ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ನಕಲಿ ಪಾಸ್ಪೋರ್ಟ್ ತಯಾರಿಸಿರುವ ಕುರಿತು ತನಿಖೆ ನಡೆಸಿದ ವೇಳೆ ಮೂವರನ್ನೊಳಗೊಂಡ ತಂಡವೊಂದು ಈ ಕಾರ್ಯ ನಡೆಸಿರುವುದು ಬೆಳಕಿಗೆ ಬಂದಿದೆ.