ಈ ಕುರಿತು ಕೇರಳ ಮೂಲದ ಸಚಿನ್ ಗಾಯಕವಾಡ್ ದೂರು ದಾಖಲಿಸಿದ್ದಾರೆ. ದೂರುದಾರ ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ ಎಂಬಾತ ಶಿರಸಿಗೆ ಬಂದಾಗ, ಆರೋಪಿಯು ಅಂಗವಿಕಲ ವ್ಯಕ್ತಿಯೊಬ್ಬ ಎರಡು ಬಂಗಾರದ ಸ್ಯಾಂಪಲ್ ತುಣುಕುಗಳನ್ನು ತೋರಿಸಿ ಖರೀದಿಸುವುದಾದರೆ ತಾಲ್ಲೂಕಿನ ಮಳಲಗಾಂವ್‌ಗೆ ಬಂದು ಹಣ ನೀಡಲು ತಿಳಿಸಿದ್ದ. ಅದರಂತೆ ಹಣ ತಂದಾಗ ಅಂಗವಿಕಲ ವ್ಯಕ್ತಿ ಸೇರಿ ಏಳು ಜನರು ನಮ್ಮನ್ನು ಯಾಮರಿಸಿ ಹಣ ಪಡೆದಿದ್ದಲ್ಲದೇ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.