ಹಳಿಯಾಳ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ ರಾಜ್ಯ ಸರ್ಕಾರ ಬೆಳೆ ಹಾನಿ ಸಮೀಕ್ಷೆ ಕೂಡಲೇ ಕೈಗೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬಿಜೆಪಿ ವತಿಯಿಂದ ತಾಲ್ಲೂಕಿನ ಮದ್ನಳ್ಳಿ ಗ್ರಾಮದ ಈರಪ್ಪಾ ಶಿವಲಿಂಗಪ್ಪಾ ಕಲಕುಂಡಿ ಎಂಬುವವರ ಕೃಷಿ ಗದ್ದೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈತರ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಆದರೆ ರಾಜ್ಯ ಸರ್ಕಾರ ಈವರೆಗೂ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರಾಜ್ಯದ ವಿವಿಧೆಡೆ ರೈತರ ಬೆಳೆ ಹಾನಿಯಾಗಿದೆ. ಆದರೇ ರಾಜ್ಯ ಸರ್ಕಾರದಿಂದ ಯಾವುದೇ ಬೆಳೆ ಸಮೀಕ್ಷೆಗೆ ಕ್ರಮವಹಿಸಿಲ್ಲ, ಬೆಳೆ ಹಾನಿಯ ಪರಿಹಾರ ಧನವನ್ನು ಕೂಡಲೇ ರೈತರಿಗೆ ಪಾವತಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಂಡಲ ಅಧ್ಯಕ್ಷ ವಿಠ್ಠಲ ಶಿದ್ದಣ್ಣವರ, ಮುಖಂಡ ಸಂತೋಷ ಘಟಕಾಂಬಳೆ, ವಿ.ಎಂ ಪಾಟೀಲ್, ಮಂಗೇಶ್ ದೇಶಪಾಂಡೆ, ಶ್ರೀನಿವಾಸ್ ಘೋಟ್ನೆಕರ, ಶಿವಾಜಿ ನರಸಾನಿ, ಅನಿಲ್ ಮುತ್ನಾಳ, ಸೋನಪ್ಪಾ ಸುಣಕಾರ, ಶಿವಾಜಿ ಪಾಟೀಲ್ ಮತ್ತಿತರ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಶಾಲೆ ಅಂಗನವಾಡಿ ರಸ್ತೆಗಳು ಸೇರಿದಂತೆ ಮತ್ತಿತರ ಮೂಲ ಸೌಕರ್ಯಕ್ಕೆ ಹೆಚ್ಚಿನ ಹಾನಿಯಾಗಿದೆ. ರಾಜ್ಯ ಸರ್ಕಾರ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಹಣ ಬಿಡುಗಡೆ ಮಾಡಬೇಕು
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ಸರ್ಕಾರ ಕೂಡಲೇ ರೈತರ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆ ಮಾಡಬೇಕು ವಿಳಂಬವಾದಲ್ಲಿ ಸರ್ಕಾರದ ವಿರುದ್ದ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು
ಸುನೀಲ ಹೆಗಡೆ ಮಾಜಿ ಶಾಸಕ

ವಿವಾದದಲ್ಲಿ ಮುಳುಗಿರುವ ಸರ್ಕಾರಕ್ಕೆ ರೈತರ ಕಷ್ಟ ಕಾಣಿಸುತ್ತಿಲ್ಲ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು
ಎಸ್.ಎಲ್.ಘೋಟ್ನೆಕರ ವಿಧಾನ ಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.