ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಕಡಲತೀರದಲ್ಲಿ ತಂತಿಬೇಲಿ ಅಳವಡಿಕೆ; ಆಕ್ಷೇಪ

Published 22 ಜುಲೈ 2023, 4:06 IST
Last Updated 22 ಜುಲೈ 2023, 4:06 IST
ಅಕ್ಷರ ಗಾತ್ರ

ಕಾರವಾರ: ಯೆಂಡಿ ಬಲೆ ಮೀನುಗಾರಿಕೆ ನಡೆಸುವ ಸ್ಥಳದಲ್ಲಿ ಅರಣ್ಯ ಇಲಾಖೆ ತಂತಿ ಬೇಲಿ ಅಳವಡಿಸಿದ್ದು, ಮೀನುಗಾರಿಕೆಗೆ ತೆರಳುವವರು ಕಡಲತೀರಕ್ಕೆ ಸಾಗಲು ಅಡ್ಡಿಯಾಗುತ್ತಿರುವ ದೂರು ವ್ಯಕ್ತವಾಗಿದೆ.

ಇಲ್ಲಿನ ಟ್ಯಾಗೋರ್ ಕಡಲತೀರದ ಶಿಲ್ಪ ವನದ ಬಳಿ ಗಿಡಗಳನ್ನು ನೆಟ್ಟಿರುವ ಅರಣ್ಯ ಇಲಾಖೆ ಅವುಗಳ ರಕ್ಷಣೆ ಸಲುವಾಗಿ ಸುಮಾರು 200 ಮೀ. ಉದ್ದದ ವರೆಗೆ ತಂತಿ ಬೇಲಿ ಅಳವಡಿಸಿದೆ. ಆದರೆ ಇದೇ ಪ್ರದೇಶಲ್ಲಿ ಮೀನುಗಾರಿಕೆ ಪರಿಕರಗಳನ್ನು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರು ದಾಸ್ತಾನಿಡುತ್ತಿದ್ದಾರೆ.

‘ಯೆಂಡಿ ಬಲೆ ಮೀನುಗಾರಿಕೆ ನಡೆಸುವ ಸಮಯ ಇದಾಗಿದ್ದು ದೋಣಿ, ಇನ್ನಿತರ ಪರಿಕರವನ್ನು ಕಡಲತೀರಕ್ಕೆ ಸಾಗಿಸಲು ಅರಣ್ಯ ಇಲಾಖೆ ಅಳವಡಿಸಿದ ತಂತಿಬೇಲಿಯಿಂದ ತೊಂದರೆ ಉಂಟಾಗಿದೆ’ ಎಂದು ಯೆಂಡಿ ಬಲೆ ಸಾಂಪ್ರದಾಯಿಕ ಮೀನುಗಾರರು ಆರೋಪಿಸಿದರು.

‘ಬೇಲಿ ತೆರವು ಮಾಡಿ ಕಡಲತೀರಕ್ಕೆ ಹೋಗಲು ದಾರಿ ಮಾಡಿಕೊಡಬೇಕು. ಯೆಂಡಿ ಬಲೆಗೆ ಮೀನುಗಳು ಸಿಕ್ಕ ಸಂದರ್ಭದಲ್ಲಿ ಮೀನುಗಳನ್ನು ಮುಖ್ಯ ರಸ್ತೆಗೆ ತರಲು ಬೇಲಿ ಹಾಕಿರುವ ಸ್ಥಳದಲ್ಲಿ ದಾರಿ ಮಾಡಿಕೊಡಬೇಕು’ ಎಂದು ಮೀನುಗಾರರು ವಲಯ ಅರಣ್ಯಾಧಿಕಾರಿ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ರೋಹಿದಾಸ ಬಾನಾವಳಿ, ಚಂದ್ರಕಾಂತ ಕುಡ್ತರಕರ್, ಅಭಯ್ ಮಾಳಸೇಕರ್, ಆನಂದ ಸುರಂಗೇಕರ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT