ಶಿರಸಿ: ತಾಲ್ಲೂಕಿನ ದೋಣಗಾರು-ಕರೂರು ರಸ್ತೆ ಮಾರ್ಗವು ಹಲವು ತಿಂಗಳಿನಿಂದ ಅಪಾಯದ ಅಂಚಿನಲ್ಲಿದ್ದು, ವಾಹನ ಸವಾರರು ಹಾಗೂ ಹಳ್ಳಿಗರು ಪ್ರತಿದಿನ ಆತಂಕದ ನೆರಳಿನಲ್ಲೇ ಸಂಚರಿಸುವಂತಾಗಿದೆ. ಹೊಸ ಸೇತುವೆ, ಪಿಚ್ಚಿಂಗ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಅನುದಾನ ಬಿಡುಗಡೆಯಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಶಿರಸಿ–ಕುಮಟಾ ಮಾರ್ಗದ ಸೋಮನಹಳ್ಳಿ ಕ್ರಾಸ್ನಿಂದ ಗೋಳಿ ಪ್ರದೇಶಕ್ಕೆ ತೆರಳುವ ಈ ರಸ್ತೆಯ ಗೋಳಿ ಹಳ್ಳದಂಚಿನಲ್ಲಿ ನಿರ್ಮಿಸಲಾಗಿದ್ದ ಪಿಚ್ಚಿಂಗ್ ಅಬ್ಬರದ ಮಳೆಗೆ ಕುಸಿದಿತ್ತು. ಇದರಿಂದ ಸೇತುವೆಗೂ, ರಸ್ತೆಗೂ ಹಾನಿಯಾಗುತ್ತಿದೆ. ಅದಾಗಿ ನಾಲ್ಕೈದು ತಿಂಗಳುಗಳು ಕಳೆದಿದೆ. ಆದರೆ ದುರಸ್ತಿ ಭಾಗ್ಯ ಕಂಡಿಲ್ಲ. ರಸ್ತೆಯಂಚು ಅರ್ಧದಷ್ಟು ಕುಸಿದು ನಿಂತಿರುವುದರಿಂದ ಬೃಹತ್ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬೈಕ್ ಮತ್ತು ಕಾರುಗಳು ಸಂಚರಿಸಲು ಹರಸಾಹಸ ಪಡಬೇಕಿದೆ.

ಗೋಳಿ ಹಳ್ಳದ ಸೇತುವೆ ಸಮೀಪ ಈ ಹಿಂದೆಯೂ ಪಿಚ್ಚಿಂಗ್ ಕುಸಿತ ಕಂಡಿತ್ತು. ಆಗ ದುರಸ್ತಿ ಕಾರ್ಯ ಮಾಡಲಾಗಿತ್ತಾದರೂ, ಕಳೆದ ಬಾರಿಯ ಭಾರಿ ಮಳೆಗೆ ಮತ್ತೆ ರಸ್ತೆ ಕುಸಿತವಾಗಿತ್ತು. ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿದ್ದು, ಇಲ್ಲಿನ ಕುಸಿತದಿಂದಾಗಿ ತಡಗುಣಿ, ತಟ್ಟಗುಣಿ, ಊರತೋಟ, ನೆಗ್ಗು, ಬಪ್ಪನಳ್ಳಿ ಸೇರಿದಂತೆ ಗೋಳಿ, ಹೊಸಳ್ಳಿ, ಅಮ್ಮಚ್ಚಿ, ಹಲಸಗಿ, ಬಾವಿಕೈ, ದಾಯಿಮನೆ, ಕೂಡಮನೆ, ಕಾರೇಮನೆ ಹಾಗೂ ಹೊಸಬಾಳೆಯಂತಹ ಹತ್ತಾರು ಗ್ರಾಮಗಳ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ.

'ದೈನಂದಿನ ಕೆಲಸ ಕಾರ್ಯಗಳಿಗೆ ಈ ಮಾರ್ಗವನ್ನೇ ಅವಲಂಬಿಸಿರುವ ಜನರಿಗೆ ದೊಡ್ಡ ವಾಹನಗಳ ಸಂಚಾರ ನಿಂತಿರುವುದರಿಂದ ಸರಕು ಸಾಗಣೆ ಹಾಗೂ ತುರ್ತು ಸೇವೆಗಳಿಗೆ ದೊಡ್ಡ ಅಡ್ಡಿಯಾಗಿದೆ' ಎನ್ನುತ್ತಾರೆ ಗ್ರಾಮಸ್ಥ ಗುರುಪಾದ ಹೆಗಡೆ. 'ಸದ್ಯಕ್ಕೆ ರಸ್ತೆ ಪೂರ್ಣವಾಗಿ ಕುಸಿಯುವ ಮುನ್ನವೇ ತಾತ್ಕಾಲಿಕವಾಗಿ ಪೈಪ್ಗಳನ್ನು ಅಳವಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು' ಎಂದು ಅವರು ಇಲಾಖೆಗೆ ಮನವಿ ಮಾಡಿದ್ದಾರೆ.

'ಸ್ಥಳೀಯ ಶಾಸಕರು ಸಹ ಘಟನಾ ಸ್ಥಳದ ಕುರಿತು ಗಮನಹರಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಲಾಖೆಯ ವತಿಯಿಂದ ಈಗಾಗಲೇ ಸರ್ಕಾರಕ್ಕೆ ದುರಸ್ತಿ ಕಾರ್ಯದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದೆ. ಶಾಶ್ವತ ಪರಿಹಾರ ಸಿಗದಿದ್ದರೆ ಈ ಭಾಗದ ಹಳ್ಳಿಗರ ಸಂಕಷ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ' ಎನ್ನುತ್ತಾರೆ ಗ್ರಾಮಸ್ಥರು.

ಗೋಳಿ ಹಳ್ಳದ ಸೇತುವೆ ಹಾಗೂ ಪಿಚ್ಚಿಂಗ್ ಎರಡು ಹೊಸದಾಗಿ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆ ವತಿಯಿಂದ ₹2 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
ಎಸ್.ಎನ್.ಸಿದ್ದಾಪುರ ಲೋಕೋಪಯೋಗಿ ಇಲಾಖೆ ಇಇ

ಯಾಮಾರಿದರೆ ಹಳ್ಳಕ್ಕೆ

‘ಕುಸಿತದ ಕಾರಣಕ್ಕೆ ರಸ್ತೆ ತೀರಾ ಇಕ್ಕಟ್ಟಾಗಿರುವ ಕಾರಣ ವಾಹನ ಸವಾರರು ಸ್ವಲ್ಪ ಯಾಮಾರಿದರೂ ನೇರವಾಗಿ ಹಳ್ಳಕ್ಕೆ ಬೀಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಕುಸಿದ ಜಾಗದಲ್ಲಿ ಬಿದಿರಿನ ಗಳ ಹಾಗೂ ಕಂಬಗಳನ್ನು ನೆಟ್ಟು ಬಳ್ಳಿಯಿಂದ ಕಟ್ಟಿ ತಾತ್ಕಾಲಿಕ ಎಚ್ಚರಿಕೆಯ ಫಲಕದಂತೆ ಬಳಸುತ್ತಿದ್ದಾರೆ’ ಎಂಬುದು ಗ್ರಾಮಸ್ಥರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.