ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಂಡೇಲಿ: ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ

Published : 21 ಜೂನ್ 2023, 15:46 IST
Last Updated : 21 ಜೂನ್ 2023, 15:46 IST
ಫಾಲೋ ಮಾಡಿ
Comments

ದಾಂಡೇಲಿ: ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ದಾಂಡೇಲಿ ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ಚುನಾವಣಾ ವಿಷಯ ನಿರ್ವಾಹಕ ಅಧಿಕಾರಿ ಗೋಪಿ ಚೌಹಾಣ್ ಇದ್ದರು.

ಮೀಸಲಾತಿ ವಿವರ ಇಂತಿದೆ: ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ (ಕಟಗೇರಿ ‘ಅ’ ವರ್ಗದ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ ವರ್ಗ); ಅಂಬೇವಾಡಿ ಅಧ್ಯಕ್ಷ (ಸಾಮಾನ್ಯ ವರ್ಗ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ); ಬಡಕಾನಶಿರಡಾ ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಕಟಗೇರಿ ‘ಅ’ ವರ್ಗದ ಮಹಿಳೆ); ಅಂಬಿಕಾನಗರ ಅಧ್ಯಕ್ಷ (ಸಾಮಾನ್ಯ ವರ್ಗ) ಉಪಾಧ್ಯಕ್ಷ (ಸಾಮಾನ್ಯ ವರ್ಗ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT