ಶಿರಸಿ: ‘ಹಿರಿಯ ಪತ್ರಕರ್ತರ ಅನುಭವ ಯುವ ಪತ್ರಕರ್ತರಿಗೆ ಮಾದರಿ ಆಗುವಂತರಿಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಶಿರಸಿ ಘಟಕ ನಗರದ ಟಿಆರ್ಸಿ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಳ್ಳೆಯ ಕೆಲಸಗಳು ಆಗಬೇಕು ಎಂಬ ತುಡಿತ ಜಿಲ್ಲೆಯ ಪತ್ರಕರ್ತರಲ್ಲಿದೆಯಲ್ಲದೇ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಯಾರೋ ಒಬ್ಬಿಬ್ಬರು ಪತ್ರಿಕಾ ರಂಗವನ್ನು ದುರುಪಯೋಗಪಡಿಸಿಕೊಳ್ಳುವವರು ಇದ್ದಿರಬಹುದು, ಆದರೆ, ಇದು ಜಿಲ್ಲೆಯ ನಿಷ್ಠಾವಂತ ಪತ್ರಕರ್ತರ ಮೇಲೆ ಪರಿಣಾಮ ಬೀರಿಲ್ಲ’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ‘ಪತ್ರಿಕೋದ್ಯಮ ಇಂದು ಸಂಕಟದಲ್ಲಿದೆ. ಪತ್ರಿಕೆ ಉಳಿಯಬೇಕೆಂದರೆ ಜನ ಒಪ್ಪುವ ಮಾದರಿಯಲ್ಲಿ ವರದಿಗಳನ್ನು ನೀಡಬೇಕು’ ಎಂದರು.

ಮಾಧ್ಯಮಶ್ರೀ ಪ್ರಶಸ್ತಿಯನ್ನು ವಿನುತಾ ಹೆಗಡೆ, ಗೋಲ್ಡನ್ ಪೆನ್ ಪುರಸ್ಕಾರವನ್ನು ಮಂಜುನಾಥ ಈರಗೊಪ್ಪ, ಮತ್ತಿಗಾರ ಸುಬ್ಬಣ್ಣ ದತ್ತಿನಿಧಿಯನ್ನು ಮಧುಸೂಧನ ಹೆಗಡೆ, ಲಕ್ಷ್ಮೀ ಗೋಪಾಲಕೃಷ್ಣ ಭಟ್ ಬಿಸ್ಲಕೊಪ್ಪ ದತ್ತಿನಿಧಿವನ್ನು ಪತ್ರಿಕಾ ವಿತರಕ ಗಣೇಶ ನೀಲೇಕಣಿ ಅವರಿಗೆ ಹಾಗೂ ಸರೋಜಾ ಮತ್ತು ಛತ್ರಪತಿ ಹೆಗಡೆ ಪುರಸ್ಕಾರವನ್ನು ಸುಧೀರ ನಾಯರ ಅವರಿಗೆ ನೀಡಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸಂಘದ ಶಿರಸಿ ಘಟಕದ ಅಧ್ಯಕ್ಷ ಸಂದೇಶ ಭಟ್, ನರಸಿಂಹ ಅಡಿ, ಕೃಷ್ಣಮೂರ್ತಿ ಕೆರೆಗದ್ದೆ, ಮಹಾದೇವ ನಾಯ್ಕ ಇದ್ದರು. ಚಿನ್ಮಯ ಕೆರೆಗದ್ದೆ ಪ್ರಾರ್ಥಿಸಿದರು.

ಪತ್ರಕರ್ತರ ಶ್ರೇಯೋಭಿವೃದ್ಧಿ ಹಾಗೂ ಕ್ಷೇಮನಿಧಿಗಾಗಿ ₹5 ಲಕ್ಷ ಸಹಾಯ ನೀಡಲಿದ್ದೇನೆ. ಇದನ್ನು ಪತ್ರಕರ್ತರ ಆರೋಗ್ಯಕ್ಕಾಗಿ ಬಡ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಳ್ಳಿ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.