ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಪಡೆಯದೆ ನಿರ್ಮಿಸಿದ್ದ ಬಡಾವಣೆಯ ನಿವೇಶನದ ನೋಂದಣಿ, ಮಾರಾಟ ರದ್ದುಪಡಿಸಿದ್ದ ರಾಜ್ಯ ಸರ್ಕಾರ ಡಿ.1ರಿಂದ ಇ–ಸ್ವತ್ತು ತಂತ್ರಾಂಶದ ಮೂಲಕ 11ಎ, 11ಬಿ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಗೆ ಮುಂದಾಗಿದೆ. ಆದರೆ, ಅರಣ್ಯ ಭೂಮಿ ಹೆಚ್ಚಿರುವ ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ನಿಯಮಾವಳಿಗಳ ತೊಡಕು ಎದುರಾಗಿದೆ.

‘ಸರ್ಕಾರ ಇ–ಸ್ವತ್ತು ತಂತ್ರಾಂಶದ ಮೂಲಕ ಆಸ್ತಿಗಳ ನೋಂದಣಿ, ಮಾರಾಟಕ್ಕೆ ಅನುಮತಿ ಒದಗಿಸಲು ಅಭಿಯಾನದ ಮಾದರಿಯ ಕಾರ್ಯಕ್ರಮ ಆರಂಭಿಸಿದೆ. ಆದರೆ, ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಅರಣ್ಯ ಭೂಮಿ, ಕರಾವಳಿ ಭಾಗದಲ್ಲಿ ಸಿಆರ್ಝಡ್ ವ್ಯಾಪ್ತಿಯಲ್ಲಿ ಇ–ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿಯಮಾವಳಿಯ ಮಾರ್ಗಸೂಚಿಗಳ 47 ಅಂಶಗಳಿಗೆ ಸ್ಪಷ್ಟನೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸದಾಗಿ ಪ್ರಮಾಣಪತ್ರ ವಿತರಿಸಲು ‘ಇ–ಸ್ವತ್ತು 2.0’ ಎಂಬ ತಂತ್ರಾಂಶ ಪರಿಚಯಿಸಲಾಗಿದೆ. ಹೊಸ ತಂತ್ರಾಂಶದಲ್ಲಿ 11 ಬಿ ಖಾತೆ ಪಡೆಯಲು 2025ರ ಏ.7ಕ್ಕಿಂತ ಮುಂಚೆ ನಿವೇಶನ ನೋಂದಣಿಯಾಗಿದ್ದರೆ ಅಥವಾ ಮನೆ ನಿರ್ಮಿಸಿದ್ದರೆ ಮಾತ್ರ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ಕಲ್ಪಿಸಲಾಗಿದೆ.

‘ಮನೆ, ವಾಣಿಜ್ಯ ಕಟ್ಟಡ, ಸರ್ಕಾರಿ ಕಟ್ಟಡಗಳು ಸೇರಿ 3,56,531 ಆಸ್ತಿಗಳು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿವೆ. ಅವುಗಳ ಪೈಕಿ 37,612 ಆಸ್ತಿಗಳು ಮಾತ್ರ ಇ-ಸ್ವತ್ತಿನಲ್ಲಿ 11ಬಿ ಪ್ರಮಾಣಪತ್ರ ಪಡೆದಿವೆ. 12,263 ಆಸ್ತಿಗಳು ಮಾತ್ರ 11ಎ ಹಾಗೂ ಬಿ ಎರಡೂ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗಿದೆ. ಒಟ್ಟಾರೆ ಆಸ್ತಿ ಪೈಕಿ ಶೇ 13.98 ರಷ್ಟು ಆಸ್ತಿಗಳು ಮಾತ್ರ ಇ-ಸ್ವತ್ತಿನಲ್ಲಿ ನೋಂದಣಿಯಾಗಿವೆ’ ಎಂದು ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಶಾಖೆಯ ಮಾಹಿತಿ ತಿಳಿಸಿದೆ.

‘ಅರಣ್ಯ ಭೂಮಿ, ಸಿಆರ್ಝಡ್ ನಿಯಮಾವಳಿ ಕಾರಣದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇ–ಸ್ವತ್ತು ಪಡೆಯುವುದು ಕಠಿಣವಾಗಿದೆ. ಇ–ಸ್ವತ್ತು ನೋಂದಣಿಯಾಗದ ಉಳಿದ ಆಸ್ತಿಗಳನ್ನು ಅಕ್ರಮ ಆಸ್ತಿಗಳು ಎಂದು ಗುರುತಿಸಿಲಾಗುತ್ತಿದೆ. ಇದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಹುತೇಕ ಆಸ್ತಿಗಳು ಅನಧಿಕೃತ ಎಂದೇ ಪರಿಗಣಿತವಾಗುತ್ತಿವೆ. ಇ–ಸ್ವತ್ತು ಇಲ್ಲದೆ ಯಾವುದೇ ಸರ್ಕಾರಿ ಸೌಲಭ್ಯ, ಬ್ಯಾಂಕ್ ಸಾಲ ದೊರೆಯುತ್ತಿಲ್ಲ. ಶೌಚಗೃಹ, ವಸತಿ ಯೋಜನೆಯ ಮನೆಗಳನ್ನು ಪಡೆಯಲು ತೊಂದರೆಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ನಾಯ್ಕ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.