ನಿರ್ವಹಣೆ ಹೊಣೆ ಖಾಸಗಿಗೆ ಏಕೆ?
‘ವಾಣಿಜ್ಯ ಬಂದರಿನ ವಾರ್ಷಿಕ ಆದಾಯ ಇಳಿಮುಖವಾಗುತ್ತಿದೆ. 2022–23ರಲ್ಲಿ ₹21 ಕೋಟಿ ಇದ್ದ ಆದಾಯವು 2023–24ಕ್ಕೆ ₹18 ಕೋಟಿಗೆ ಇಳಿಕೆಯಾಗಿತ್ತು. 2024–25ರಲ್ಲಿ ₹14.29 ಕೋಟಿಗೆ ಇಳಿಕೆಯಾಗಿದೆ. ಆದರೆ, ಬಂದರು ನಿರ್ವಹಣೆ, ಹೋಳೆತ್ತುವ ಯೋಜನೆಗೆ ₹30 ಕೋಟಿಗೂ ಹೆಚ್ಚು ಮೊತ್ತ ತಗಲುತ್ತಿದೆ. ಆದಾಯಕ್ಕಿಂತ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಖಾಸಗಿ ಕಂಪನಿಗಳಿಗೆ ನಿರ್ವಹಣೆಯ ಹೊಣೆ ನೀಡಲಾಗುತ್ತಿದೆ. ಇದರಿಂದ ಆದಾಯ ವೃದ್ಧಿಯಾಗಬಹುದು ಎಂಬ ಯೋಚನೆ ಇದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.