ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡವರಿಗೆ ಪರ್ಯಾಯ ನೆಲೆ ಸಿಗಲಿಲ್ಲ. ನೀರಾವರಿ ವ್ಯವಸ್ಥೆಯೇ ನಾಶವಾಗಿದ್ದಕ್ಕೆ ಇದ್ದ ತೋಟಗಳೂ ಹಾಳಾಗಿವೆ. ಸರ್ಕಾರ ಈಗಲಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ
– ವೆಂಕಟರಮಣ ಬೆಳ್ಳಿ, ಕಳಚೆ ನಿವಾಸಿ
ಕುಮಟಾದ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾದ ಜನರಿಗೆ ಪರ್ಯಾಯ ಭೂಮಿ ಒದಗಿಸುವ ಕೆಲಸ ನಡೆದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ಜನ ಸಂಬಂಧಿಕರ ಮನೆಯಲ್ಲಿ ಉಳಿಯುತ್ತಿದ್ದಾರೆ.