ಕುಮಟಾ: ತನ್ನ ವಿಚ್ಛೇದಿತ ಪತಿ ಹಾಗೂ ಆತನ ಜೊತೆ ವಾಸವಾಗಿದ್ದ ಇನ್ನೊಬ್ಬ ಮಹಿಳೆ ತನ್ನ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಾಲ್ಲೂಕಿನ ಹೊಲನಗದ್ದೆಯ ನಿವಾಸಿ ಚಿತ್ರಾ ನಾಯ್ಕ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣದ ವಿವೇಕನಗರ ನಿವಾಸಿ ವಿಜಯ್ ನಾಯ್ಕ ಹಾಗೂ ದೀಪಾ ನಾಯ್ಕ ಆರೋಪಿಗಳು.

ಎಂಟು ತಿಂಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದ ಚಿತ್ರಾ ನಾಯ್ಕ ಅವರು ಪ್ರತ್ಯೆಕವಾಗಿ ವಾಸಿಸುತ್ತಿದ್ದು, ಅವರ ಇಬ್ಬರು ಮಕ್ಕಳಾದ ತುನುಷ್ ನಾಯ್ಕ (6) ಹಾಗು ಹನೀಷಾ ನಾಯ್ಕ (10) ಅವರು ತಮ್ಮ ತಂದೆ ವಿಜಯ್ ಅವರೊಂದಿಗೆ ವಾಸಿಸುತ್ತಿದ್ದರು.

‘ಗುರುವಾರ ಅವರನ್ನು ನೋಡಲು ವಿವೇಕನಗರದ ವಿಜಯ್ ಅವರ ಮನೆಗೆ ಹೋದಾಗ ಮಕ್ಕಳ ಕೈ, ಕಾಲಿಗೆ ಗಾಯಗಳಾಗಿದ್ದವು. ಹಲ್ಲೆ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಬೈದಿದ್ದಾರೆ, ದೀಪಾ ನಾಯ್ಕ ಹಲ್ಲೆ ಮಾಡಿದ್ದಾರೆ’ ಎಂದು ಚಿತ್ರಾ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪಿ.ಎಸ್.ಐ ಸಾವಿತ್ರಿ ನಾಯಕ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.