ಶಿರಸಿ: ಇಲ್ಲಿನ ಗಾಂಧಿನಗರದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ಮಿಕ ಭವನ ಕಾಮಗಾರಿ ನಾಲ್ಕು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಹಂತಕ್ಕೆ ಬಂದಿಲ್ಲದಿರುವುದು ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಶಿರಸಿ, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕುಗಳಿಗೆ ಕಾರ್ಮಿಕ ಭವನ ಮಂಜೂರು ಮಾಡಿಸಿದ್ದರು. 2022ರ ಫೆಬ್ರವರಿಯಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ನಿರ್ಮಿತಿ ಕೇಂದ್ರ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿತ್ತು.

‘ಮೂರು ಅಂತಸ್ತಿನ ಭವನದ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಕಾಂಪೌಂಡ್, ಮುಖ್ಯ ದ್ವಾರದ ಬಾಗಿಲು ಸೇರಿದಂತೆ ಕೆಲವು ಕಾಮಗಾರಿಗಳು ಉಳಿದುಕೊಂಡಿವೆ. ಯಾವುದೇ ಕಾಮಗಾರಿ ನಡೆಯದ ಕಾರಣ ಭವನದ ದ್ವಾರಕ್ಕೆ ಕೆಂಪುಗಲ್ಲು ಅಡ್ಡ ಇಟ್ಟು ಬಂದ್ ಮಾಡಲಾಗಿದೆ. ವರ್ಷಗಳಿಂದ ಕಾಮಗಾರಿ ನಡೆದರೂ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಕಾರ್ಮಿಕ ಮುಖಂಡ ಉಮೇಶ ನಾಯ್ಕ ಆರೋಪಿಸಿದರು.

‘ತಾಲ್ಲೂಕಿನಲ್ಲಿ 7 ಸಾವಿರದಷ್ಟು ನೋಂದಾಯಿತ ಕಟ್ಟಡ ಕಟ್ಟಡ ಕಾರ್ಮಿಕರಿದ್ದಾರೆ. ಭವನ ಪೂರ್ಣಗೊಂಡು ಬಳಕೆಗೆ ನೀಡಿದ್ದರೆ ಕಾರ್ಮಿಕರು ಕಾರ್ಯಕ್ರಮ, ಸಭೆ, ಸಮಾರಂಭ ನಡೆಸಲು ಅನುಕೂಲ ಆಗುತ್ತಿತ್ತು. ಈಗ ದುಬಾರಿ ಹಣ ನೀಡಿ ಬೇರೆಡೆ ಕಲ್ಯಾಣ ಮಂಟಪ, ಸಭಾಭವನಗಳ ಬಾಡಿಗೆ ಪಡೆದು ಕಾರ್ಯಕ್ರಮ ನಡೆಸುವಂತಾಗಿದೆ. ಕಾಮಗಾರಿ ಆರಂಭವಾಗಿ 4 ವರ್ಷಗಳಾದರೂ ಈವರೆಗೆ ಉದ್ಘಾಟನೆಯಾಗದಿರುವುದು ಕಾರ್ಮಿಕರನ್ನು ಸೌಲಭ್ಯದಿಂದ ವಂಚಿಸುವ ಪ್ರಯತ್ನ’ ಎಂದು ದೂರಿದರು.

‘ಕಾರ್ಮಿಕ ಭವನದ ಕೆಲಸ ಬಹುತೇಕ ಮುಗಿದಿದೆ. ಕಟ್ಟಡಕ್ಕೆ ಆರೆಂಟು ತಿಂಗಳ ಹಿಂದೆ ಸುಣ್ಣಬಣ್ಣ ಬಳಿಯಲಾಗಿದೆ. ವಿದ್ಯುತ್ ಸಂಪರ್ಕದ ವ್ಯವಸ್ಥೆ ಕೂಡ ಆಗಿದೆ. ಕಾಂಪೌಂಡ್ ನಿರ್ಮಾಣಕ್ಕೆ ಪಕ್ಕದ ಜಾಗದವರು ತಕರಾರು ತೆಗೆದಿದ್ದು, ಸರ್ವೆ ನಡೆಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಕಂದಾಯ ಇಲಾಖೆ ಮೂಲಕ ಸರ್ವೆ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಆದರೆ ಈವರೆಗೆ ಸರ್ವೆ ಮಾಡುವ ಕಾರ್ಯವಾಗಿಲ್ಲ’ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಕುಮಾರ ಶೆಟ್ಟಿ ಪ್ರತಿಕ್ರಿಯಿಸಿದರು.

2022ರಲ್ಲಿ ಕಾಮಗಾರಿಗೆ ಭೂಮಿ ಪೂಜೆ ₹2 ಕೋಟಿ ವೆಚ್ಚದ ಭವನ 4 ವರ್ಷವಾದರೂ ಉದ್ಘಾಟನೆ ಭಾಗ್ಯವಿಲ್ಲ

ಕಾಂಪೌಂಡ್ ನಿರ್ಮಾಣಕ್ಕೆ ಜಾಗದ ಅವಕಾಶ ಆದ ತಕ್ಷಣ ನಿರ್ಮಿಸಿ ಕಟ್ಟಡ ಉದ್ಘಾಟನೆಗೆ ಸಜ್ಜುಗೊಳಿಸಲಾಗುವುದು
= ಕುಮಾರ ಶೆಟ್ಟಿ ನಿರ್ಮಿತಿ ಕೇಂದ್ರದ ಎಂಜಿನಿಯರ್

ಭವನ ಉಪಯೋಗಕ್ಕೆ ಸಿಗಲಿ ‘2025ರ ಆರಂಭದಲ್ಲೇ ಕಟ್ಟಡ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಆಗಲೇ ಕಾಂಪೌಂಡ್ ನಿರ್ಮಾಣ ಜಾಗದ ಸಮಸ್ಯೆ ಮುನ್ನೆಲೆಗೆ ಬಂದಿತ್ತು. ಸರ್ವೆಗೆ ಅರ್ಜಿ ಸಲ್ಲಿಸಿ 7–8 ತಿಂಗಳಾದರೂ ಇನ್ನೂ ಯಾವುದೇ ಸರ್ವೆ ಕಾರ್ಯ ನಡೆದಿಲ್ಲ. ಕೇವಲ ಸರ್ವೆ ಉದ್ದೇಶಕ್ಕೆ ಮಾತ್ರ ಕಟ್ಟಡ ಉದ್ಘಾಟನೆ ತಡೆಹಿಡಿಯಲಾಗುತ್ತಿದ್ದು ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಿ ಕಾರ್ಮಿಕರ ಭವನದ ಉಪಯೋಗ ಕಾರ್ಮಿಕರಿಗೆ ಸಿಗುವಂತಾಗಬೇಕು’ ಎಂಬುದಾಗಿ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.