ಕುಮಟಾ: ತಾಲ್ಲೂಕಿನ ಕಿಮಾನಿಯಲ್ಲಿ ಗುರುವಾರ ಮುಂಜಾನೆ ನಾಯಿ ಬೇಟೆಯಾಡಲು ಊರಿಗೆ ಬಂದ ಚಿರತೆಯೊಂದು, ಮನೆಯ ಅಂಗಳದಲ್ಲಿರುವ ನಾಯಿ ಪಂಜರದಲ್ಲಿ ಆಕಸ್ಮಿಕವಾಗಿ ಸೆರೆಯಾಗಿದೆ.

ಕಿಮಾನಿಯ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ ನಾಯಿ ಪಂಜರದ ಮೂಲೆಯಲ್ಲಿ ಕುಳಿತು ಚಿರತೆ ಗರ್ಜಿಸುತ್ತಿತ್ತು. ಇನ್ನೊಂದು ಮೂಲೆಯಲ್ಲಿದ್ದ ನಾಯಿ ಮರಿ ಬೆದರಿ ಚೀರುತ್ತಿತ್ತು. ಇದನ್ನು ಕಂಡು ಮನೆಯವರು ಉದ್ದ ಕಬ್ಬಿಣದ ಸರಳಿನ ಸಹಾಯದಿಂದ ನಾಯಿ ಪಂಜರದ ಬಾಗಿಲು ಮುಚ್ಚಿದರು.

'ಜನರನ್ನು ನೋಡಿ ಭಯಗೊಂಡ ಚಿರತೆ ನಾಯಿಗೆ ಏನೂ ಮಾಡದೆ ಸುಮ್ಮನೆ ಕುಳಿತಿತ್ತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಸಿಬ್ಬಂದಿ ಬಂದು ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದರು' ಎಂದು ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿ ನರೇಶ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.