ಹೊನ್ನಾವರ: ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು, ಅಕ್ರಮ ಮಣ್ಣು ಗಣಿಗಾರಿಕೆ ಮೊದಲಾದ ಕಾರಣಗಳಿಂದ ತಾಲ್ಲೂಕಿನಲ್ಲಿ ಹರಿಯುವ ಗುಂಡಬಾಳಾ ನದಿಯಲ್ಲಿ ನೀರಿನ ಸ್ವಾಭಾವಿಕ ಹರಿಯುವಿಕೆಗೆ ಧಕ್ಕೆಯಾಗಿದ್ದು ದಿಢೀರ್ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂಬ ದೂರು ಹೆಚ್ಚಿದೆ.

ನದಿಯಲ್ಲಿ ಮಣ್ಣು, ತ್ಯಾಜ್ಯ ಶೇಖರಣೆಯಾಗಿ ಮಳೆಗಾಲದಲ್ಲಿ ಆಗಾಗ ನದಿ ಏಕಾಏಕಿ ಉಕ್ಕಿ ಹರಿದು ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ಇದು ಕೃತಕ ನೆರೆಯಂತೆ ಭಾಸವಾಗುತ್ತಿದೆ ಎಂಬುದು ನದಿ ತಟದ ಪ್ರದೇಶದ ಜನರ ದೂರು.

ಘಟ್ಟದ ಮೇಲಿನ ಸಿದ್ದಾಪುರದಲ್ಲಿ ಉಗಮಿಸಿ ಬೆಟ್ಟ-ಗುಡ್ಡಗಳಲ್ಲಿ ಪ್ರವಹಿಸಿ ನಾಡಿನ ಮಧ್ಯದಲ್ಲಿ ಸಾಗಿ ಶರಾವತಿ ನದಿ ಸೇರುವ ಗುಂಡಬಾಳ ನದಿ ‘ನೆರೆ ನದಿ’ ಎಂದೇ ಸ್ಥಳೀಯವಾಗಿ ಹೆಸರಾಗಿದೆ. ತಾಲ್ಲೂಕಿನ ಮುಟ್ಟ ಸಮೀಪ ಬಹು ಹಿಂದಿನಿಂದ ಗ್ರಾಮಸ್ಥರೇ ಸೇರಿಕೊಂಡು ಪ್ರತಿವರ್ಷ ತಾತ್ಕಾಲಿಕ ಬಾಂದಾರ ನಿರ್ಮಿಸಿ ಮಳೆಗಾಲದ ಪೂರ್ವದಲ್ಲಿ ಅದನ್ನು ತೆಗೆಯುತ್ತಿದ್ದರು. ಇದಕ್ಕೆ ಬದಲಾಗಿ ಕೆಲ ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಾಂಕ್ರಿಟ್ ಬಾಂದಾರ ನಿರ್ಮಿಸಲು ಮುಂದಾಗಿ, ಅರ್ಧಕ್ಕೆ ಕೆಲಸ ಕೈಬಿಟ್ಟಿದ್ದರಿಂದ ಬಹುಬೇಗನೆ ನೆರೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂಬುದು ಸ್ಥಳೀಯರ ದೂರು.

‘ಬಾಂದಾರ ನಿರ್ಮಾಣಕ್ಕೆ ಕೆಲ ಕಂಬಗಳನ್ನು ನಿರ್ಮಿಸಲಾಯಿತು. ಆದರೆ ಕೆಲಸ ಅರ್ಧಕ್ಕೆ ನಿಂತು ಹೋಗಿ ಕಂಬ ಮಾತ್ರ ನದಿಯಲ್ಲೇ ಉಳಿದಿದೆ. ಮಣ್ಣಿನ ಗಡ್ಡೆಯೊಂದಿಗೆ ನೂರಾರು ಗಿಡ-ಗಂಟಿಗಳು ನೀರಿನಲ್ಲಿ ತೇಲಿಬಂದು ಕಸ ಕಡ್ಡಿ ಹಾಗೂ ಇತರ ತ್ಯಾಜ್ಯದೊಂದಿಗೆ ಸೇರಿ ಕಂಬಗಳಿಗೆ ಸುತ್ತಿಕೊಂಡಿರುವುದರಿಂದ ನೀರು ಹರಿಯಲು ಅಡ್ಡಿಯಾಗಿದೆ’ ಎನ್ನುತ್ತಾರೆ ಮುಟ್ಟ ಗ್ರಾಮಸ್ಥರು.

‘ನೀರು ಸರಾಗವಾಗಿ ಹರಿಯದೆ ನದಿಯಲ್ಲಿ ಆಗಾಗ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಮಳೆ ನಿಂತರೂ ನೀರಿನ ಮಟ್ಟ ಇಳಿಯುತ್ತಿಲ್ಲ’ ಎಂದು ಗುಂಡಿಬೈಲ್ನ ಈಶ್ವರ ಹಳ್ಳೇರ ಅಳಲು ತೋಡಿಕೊಂಡರು.

ಪ್ರಸ್ತುತ ವರ್ಷದಲ್ಲಿ ಎರಡನೇ ಬಾರಿಗೆ ಗುಂಡಬಾಳ ನದಿಯಲ್ಲಿ ನೆರೆ ಬಂದಿದ್ದು, ಶನಿವಾರ ನೆರೆ ನೀರು ನದಿ ದಂಡೆಗಳ ತಗ್ಗು ಪ್ರದೇಶಗಳಿಗೆ ನುಗ್ಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಮುಟ್ಟ ಬಾಂದಾರ ನಿರ್ಮಾಣ ಕಾಮಗಾರಿ ಯೋಜನೆ ಕೈಬಿಡಲಾಗಿದ್ದು ಈ ಹಿಂದೆ ಅಳವಡಿಸಿದ್ದ ಕಂಬಗಳನ್ನು ತೆಗೆಯಲು ₹5 ಲಕ್ಷ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಿನ ಹರಿವು ಹೆಚ್ಚಿರುವುದರಿಂದ ಸದ್ಯ ಕೆಲಸ ಮಾಡಲಾಗುತ್ತಿಲ್ಲ.
– ಅನಿಲಕುಮಾರ ಎಸ್., ಸಣ್ಣನೀರಾವರಿ ಇಲಾಖೆ ಎಂಜಿನಿಯರ್

ಅಕ್ರಮ ಮಣ್ಣು ಗಣಿಗಾರಿಕೆಯೂ ಕಾರಣ

‘ಎರಡು ವರ್ಷಗಳ ಹಿಂದೆ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ಪೈಪ್ಲೈನ್ ಅಳವಡಿಸಲು ಹಡಿನಬಾಳ ಸಮೀಪ ನೂರಾರು ಲಾರಿಗಳಲ್ಲಿ ಮುಗ್ವಾ ಹುಲಿಯಪ್ಪನಕಟ್ಟೆ ಗುಡ್ಡದಿಂದ ಅಕ್ರಮವಾಗಿ ಮಣ್ಣು ತಂದು ನದಿಗೆ ಸುರಿದು ತಾತ್ಕಾಲಿಕ ಅಡ್ಡಗೋಡೆ ನಿರ್ಮಿಸಲಾಗಿತ್ತು. ಕಾಮಗಾರಿ ಮುಗಿದ ನಂತರ ಮಣ್ಣೆಲ್ಲವೂ ನದಿ ಪಾಲಾಗಿ ನದಿಯ ಆಳ ಇನ್ನಷ್ಟು ಕಡಿಮೆಯಾಯಿತು. ಪ್ರಸ್ತುತ ಕಾಮಗಾರಿ ನಡೆದ ನಂತರದಲ್ಲಿ ಕಳೆದ ಒಂದೇ ಮಳೆಗಾಲದಲ್ಲಿ ಗುಂಡಬಾಳ ನದಿಗೆ 6 ಬಾರಿ ನೆರೆ ಬಂದಿದೆ. ಹುಲಿಯಪ್ಪನಕಟ್ಟೆಯಲ್ಲೂ ಅಕ್ರಮ ಮಣ್ಣು ಗಣಿಗಾರಿಕೆಗೆ ಗುಡ್ಡ ಕರಗುತ್ತಿದೆ’ ಎಂದು ಸ್ಥಳೀಯರಾದ ವೆಂಕಟ್ರಮಣ ಶೆಟ್ಟಿ ಇತರರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.