‘ಏಪ್ರಿಲ್ 15 ರಿಂದ ಇಂಟರ್ನ್‌ಶಿಪ್ ಪ್ರಾರಂಭವಾಗಲಿದ್ದು, ಮೊದಲ ಬ್ಯಾಚ್‍ನಲ್ಲಿ ಸುಮಾರು 175 ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ನೌಕಾದಳದ ಹಡಗುಕಟ್ಟೆಯಲ್ಲಿ ನಡೆಯುವ ಚಟುವಟಿಕೆ, ಹಡಗುಗಳ ದುರಸ್ತಿ ಕುರಿತು ಅವರಿಗೆ ತರಬೇತಿ ಪಡೆಯಲು ಉತ್ತಮ ಅವಕಾಶ ಸಿಗಲಿದೆ. ಭವಿಷ್ಯದಲ್ಲಿ ಅವರಿಗೆ ಉನ್ನತಮಟ್ಟದ ಉದ್ಯೋಗಾವಕಾಶ ಪಡೆಯಲೂ ಇದು ದಾರಿಯಾಗುವ ವಿಶ್ವಾಸವಿದೆ. ಮೊದಲ ವರ್ಷದಲ್ಲೇ ವಿವಿಧ ಬ್ಯಾಚ್‍ಗಳ ಮೂಲಕ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುವ ನಿರೀಕ್ಷೆ ಇದೆ’ ಎಂದು ನೌಕಾದಳದ ಅಧಿಕಾರಿಗಳು ಭರವಸೆ ನೀಡಿದರು.