ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಪರಿಶಿಷ್ಟರ ಅವಹೇಳನ: ಆರಗ ಜ್ಞಾನೇಂದ್ರ, ಉಪೇಂದ್ರ ವಿರುದ್ಧ ಪ್ರತಿಭಟನೆ

Published 19 ಆಗಸ್ಟ್ 2023, 7:38 IST
Last Updated 19 ಆಗಸ್ಟ್ 2023, 7:38 IST
ಅಕ್ಷರ ಗಾತ್ರ

ಕಾರವಾರ: ಪರಿಶಿಷ್ಟರನ್ನು ಅವಹೇಳನ ಮಾಡಿದ ಚಿತ್ರ ನಟ ಉಪೇಂದ್ರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅವಹೇಳನ ಮಾಡಿದ ಶಾಸಕ ಆರಗ ಜ್ಞಾನೇಂದ್ರ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿದ ಘಟನೆ ಖಂಡಿಸುವ ಜತೆಗೆ, ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಪ್ರಮುಖ ಶಿವಾಜಿ ಬನವಾಸಿ, 'ಪರಿಶಿಷ್ಟರನ್ನು ಅವಹೇಳನ ಮಾಡುವ, ಅವರ ಮೇಲೆ ದೌರ್ಜನ್ಯ ಎಸಗುವುದು ಈಚೆಗೆ ಹೆಚ್ಚುತ್ತಿದೆ. ಇದು ನಿಲ್ಲಬೇಕು' ಎಂದರು.

'ಶಾಸಕರಾದ ಆರಗ ಜ್ಞಾನೇಂದ್ರ ಖರ್ಗೆ ಅವರು ಪರಿಶಿಷ್ಟರು ಎಂಬ ಕಾರಣಕ್ಕೆ ಅವರನ್ನು ಅವಹೇಳನ ಮಾಡಿ ಮನುವಾದಿ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಇದೇ ಹಾದಿಯಲ್ಲಿ ನಟ ಉಪೇಂದ್ರ ಸಾಗಿದ್ದಾರೆ. ಇಬ್ಬರ ಮೇಲೂ ಕ್ರಮವಾಗಬೇಕು' ಎಂದು ಒತ್ತಾಯಿಸಿದರು.

ಶ್ಯಾಮಸುಂದರ ಗೋಕರ್ಣ, ನಾಗೇಶ ಮಠದಕೇರಿ, ಚಂದ್ರು ಹೊಸಕೊಪ್ಪ, ಸೀತಾ ಸಿದ್ಧಿ, ನಾಗರಾಜ ಸಿದ್ಧಿ, ಬಾಲು ಲಾಂಜೇಕರ್, ಬಸವರಾಜ ಅಜ್ಜರಣಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT