ಶಿರಸಿ: ನಗರದಲ್ಲಿ ಈಗಿರುವ ತಾತ್ಕಾಲಿಕ ನಿಲ್ದಾಣಗಳನ್ನು ಅಧಿಕೃತಗೊಳಿಸಿ ಶೆಡ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು, ಆಟೊ ನಿಲ್ದಾಣಗಳನ್ನು ಹೆಚ್ಚಿಸಬೇಕೆಂದು ಇಲ್ಲಿನ ಆಡಳಿತ ಸೌಧದಲ್ಲಿ ಶನಿವಾರ ಆಟೊ ಚಾಲಕರ ಸಮಸ್ಯೆಗಳ ಕುರಿತು ತಹಶೀಲ್ದಾರ್ ಪಟ್ಟರಾಜ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಟೊ ಚಾಲಕರು ಹಾಗೂ ಮಾಲೀಕರು ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.

ಸರ್ಕಾರದ ವಿವಿಧ ಯೋಜನೆಗಳಿಂದ ಪ್ರಯಾಣಿಕರಿಲ್ಲದೇ ದಿನಕ್ಕೆ 4 ರಿಂದ 5 ಬಾಡಿಗೆ ಸಿಗುವುದರಿಂದ ಜೀವನದ ನಿರ್ವಹಣೆಗೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ. ಆದ್ದರಿಂದ ಹೊಸ ಆಟೊಗಳಿಗೆ ಪರವಾನಗಿ ನೀಡಬಾರದು ಎಂದು ಸಭೆಯ ಗಮನ ಸೆಳೆದರು.

ಕಳೆದ ಎರಡ್ಮೂರು ವರ್ಷಗಳಿಂದ ಆಟೊ ಓಡಿಸುತ್ತಿದ್ದೇವೆ. ನಮಗೆ ಸಂಘಗಳಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿಲ್ಲ. ನಿಲ್ದಾಣಗಳಲ್ಲಿ ನಿಲ್ಲಿಸಲು ಅವಕಾಶ ಆಗುತ್ತಿಲ್ಲ ಎಂದು ಒಂದಷ್ಟು ಆಟೊ ಚಾಲಕರು ದೂರಿದರು.

ಇದಕ್ಕೆ ಆಟೊ ಚಾಲಕ ಹಾಗೂ ಮಾಲಕರ ಸಂಘದವರು ಸ್ಪಷ್ಟನೆ ನೀಡಿ, ನಗರದಲ್ಲಿ 44 ಆಟೊ ಸ್ಟ್ಯಾಂಡ್ಗಳಿವೆ. ಅದರಲ್ಲಿ ಅಧಿಕೃತವಾಗಿ 7 ನಿಲ್ದಾಣಗಳಿವೆ. ಹೀಗಿದ್ದರೂ 34 ನಿಲ್ದಾಣಗಳಿಗೆ ಫಲಕ ಹಾಕಿಕೊಂಡಿದ್ದೇವೆ. ಒಂದು ನಿಲ್ದಾಣದಲ್ಲಿ ತಲಾ 10–15 ಆಟೊಗಳನ್ನು ನಿಲ್ಲಿಸಬಹುದಾಗಿದೆ. ಇದಕ್ಕೂ ಹೆಚ್ಚಾದರೆ ರಸ್ತೆಯ ಮೇಲೆ ನಿಲ್ಲಿಸಬೇಕಾಗುತ್ತದೆ. ಜತೆಯಲ್ಲಿ ಈ ಮೊದಲು ಇದ್ದವರಿಗೇ ವ್ಯವಹಾರ ಇಲ್ಲ, ದಿನಕ್ಕೆ ₹100- ₹200 ಗಳಿಸುವುದು ಕಷ್ಟವಾಗಿದೆ. ಆದರೂ ತಿಂಗಳಿಗೆ 6–7 ಹೊಸ ಆಟೊಗಳು ಬರುತ್ತಲೇ ಇವೆ. ಹೀಗಿರುವಾಗ ನಾವು ಎಲ್ಲಿ ಜಾಗ ನೀಡಬೇಕು, ಸಂಘದ ಸದಸ್ಯತ್ವ ಕೊಟ್ಟರೆ ನಿಲ್ಲಿಸಲು ಅವಕಾಶ ಕೊಡಬೇಕಾಗುತ್ತದೆ. ಜಾಗವೇ ಇಲ್ಲದಾಗ ನಾವು ಅಸಹಾಯಕರಾಗಿದ್ದೇವೆ. ಹೀಗಾಗಿ ನಿಲ್ದಾಣಗಳನ್ನು ಇನ್ನಷ್ಟು ಹೆಚ್ಚಿಸಿಕೊಡಬೇಕು. ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್ಗೆ ತಿಳಿಸಿದರು.

ಸಿಪಿಐ ಶಶಿಕಾಂತ ವರ್ಮಾ, ಶಿರಸಿ ನಗರ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ, ಬಾಲಚಂದ್ರ, ಈಶ್ವರ ಆಚಾರಿ, ಇದ್ದರು.

ನಗರಸಭೆ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಿವಿಧ ಇಲಾಖೆಯ ಸಹಕಾರದಲ್ಲಿ ಆಟೊ ನಿಲ್ದಾಣ ಪರಿಶೀಲಿಸಿ ಹೊಸ ಆಟೊ ನಿಲ್ದಾಣ ಮಾಡಲು ಸ್ಥಳಾವಕಾಶದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು
ಪಟ್ಟರಾಜ ಗೌಡ ತಹಶೀಲ್ದಾರ್

‘ಸರ್ಕಾರ ಕಡಿವಾಣ ಹಾಕಲಿ’

ನಗರದಲ್ಲಿ ಅಧಿಕೃತ ಆಟೊ ನಿಲ್ದಾಣಗಳು ಬೆರಳೆಣಿಕೆಯಲ್ಲಿವೆ. ಅದರ ಹೊರತಾಗಿ ಒಂದಷ್ಟು ಕಡೆಗಳಲ್ಲಿ ಆಟೊಗಳನ್ನು ನಿಲ್ಲಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ನಗರದಲ್ಲಿ 800ಕ್ಕೂ ಹೆಚ್ಚು ಆಟೊಗಳಿದ್ದು ನಿಲ್ಲಿಸುವುದೇ ಸಮಸ್ಯೆಯಾಗುತ್ತಿದೆ. ಹೀಗಿದ್ದರೂ ಇನ್ನಷ್ಟು ಆಟೊಗಳಿಗೆ ಅನುಮತಿ ನೀಡಲಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.